ನನ್ನದಲ್ಲ ಈ ಕವಿತೆ
ನನ್ನ ಮನಸಿನದು
ನನ್ನ ಭಾವದ ಅಲೆಗಳದು
ಹರಿಗೋಲ ಲೀಲೆಯದು ||

ದೋಣಿಯಲಿ ಸಾಗುತ
ಬೀಸಿ ತಂಗಾಳಿಯಲಿ
ಕಲರವಗೀತೆ ಚಿತ್ರ ಚಿತ್ತದೆ
ದಡವ ಸೇರುವದೊಂದಾಸೆಯಲಿ ನನ್ನ ಮನವು ||

ಗೋಧೂಳಿಯ ಹೊಂಬೆಳಕಿನಲಿ
ಸುಂದರ ಕನಸ ಎಳೆಯಲಿ
ಭಾವನೆಗಳ ಜೊತೆಯಲಿ
ಆಡುವ ಸಂಗಾತಿ ನನ್ನ ಮನವು ||

ಸೂತ್ರಧಾರಿ ಇರುವ ತನಕ
ಯಾರ ಪರಿವೆಯು ನನಗಿಲ್ಲ
ಸಸಿಯೊಡೆದ ಚಿಗುರಂತೆ
ಬಯಸಿ ಬಂದ ಲತೆಯಂತೆ ನನ್ನ ಮನವು ||
*****

Latest posts by ಹಂಸಾ ಆರ್‍ (see all)