೧ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದರೆ-ಗೆಳತಿ ರೊಟ್ಟಿಯ ತಪ್ಪೇನೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದರೆ-ಗೆಳತಿ ತುಪ್ಪದ ತಪ್ಪೇನೆ ರೊಟ್ಟಿಯದು ತಪ್ಪಿಲ್ಲ ತುಪ್ಪದ ತಪ್ಪಿಲ್ಲ ಯಾರದು ತಪ್ಪಿಲ್ಲ-ಗೆಳೆಯ ಯಾರದು ತಪ್ಪಿಲ್ಲ ೨ ರೊಟ್ಟಿ ಜಾರಿ ತುಪ್ಪದಲ್...

ಅರುಣನುದಯನೆ ನಿನ್ನ ಕರುಣ ಕಮಲದಿಂದಲಿ ಜಗದ ಜೀವ ಚೇತನವಾಗಿ ಸುಂದರ ರೂಪತಳೆದು ತೋರುತಿಹುದು ನಿತ್ಯ ಸತತ|| ದಿನದ ಪ್ರತಿಘಳಿಗೆಯನು ಬಿಡದೆ ನೀ ಬೆಳಗಿ ಬೆಳೆಯುತ ಲೋಕವನುದ್ದರಿಸುತಿರುವೆ| ಬೆಳೆದು ಬೆಳೆದಂತೆ ಸವೆದು ಇತರರಿಗೆ ಚಿಕ್ಕವನಾಗಿರುವಂತೆ ತೋರ...

ಪ್ರಕೃತಿ ಎನ್ನನ್ಯಾಕೆ ಬರೆಸಿಹುದು ? ಯಾಕಾನು ಬರೆಯುವೆನೆಂದು ಕೇಳಿದೊಡೆ ಆಕಾನು ಯಾಕಷ್ಟು ತರುಲತೆಯ ಬೆಳೆಸಿಹುದೆಂ ದುಕೇಳಲು ಬೇಕು. ತರತರದ ಜೀ ವಕಾಮಕಪ್ಪಂತೇನೆಲ್ಲವನು ಬೆಳೆಸಿರ್ಪ ಪ್ರಕೃತಿಯೆ ಮತಿಯಾಗಿ ಬರೆಸಿಹುದೆನ್ನ – ವಿಜ್ಞಾನೇಶ್ವರ *...

ಏಕೆ ಜನುವ ಕೊಟ್ಟೆಯಮ್ಮಾ ! ಗಂಡಾಗಿ ಜನರ ದೇವರಿಗೆ ತಲೆ ಕೆಡಿಸಿಕೊಳ್ಳಲಿಕೆ. ನಾನು ಹುಟ್ಟಿದ ಕೂಡಲೆ ಮಾರಿದೇವಿಯ ಒಳಿತು ಕೋರಿ ಹರಕೆ ಕಟ್ಟಿ, ಕಾಲು ತೊಳೆದು ಬಿಟ್ಟರು ಸಾಕಿದ್ದಕ್ಕೆ ಸುಂಕವಾಗಿ ಪ್ರಾಣ ಕೇಳುವ ಜನರು. ನಾನು ಕೋಣ! ಉಬ್ಬಿ ಹೋದೆ ದುಡಿಸ...

ಭಯ ಹುಟ್ಟಿಸಬೇಡ… ಬೆಂಕಿಯ ಮುಟ್ಟಿ ನೋಡುತ್ತೇನೆ ತಡೆಯಬೇಡ… ಕಡಲೊಳಗೆ ಧುಮುಕಿ ಈಜುತ್ತೇನೆ ನಗಬೇಡ… ಬಿಸಿಲುಗುದುರೆಯನೇರಿ ಹೋಗುತ್ತೇನೆ ಅಣಕಿಸಬೇಡ… ಮರಳೊಳಗೆ ಗೂಡು ಕಟ್ಟುತ್ತೇನೆ ಎಚ್ಚರಿಸಬೇಡ… ಮೊಟ್ಟೆಗೆ ಕಾವಿ...

ಒಲೆಗಳು ಬದಲಾಗಿವೆ ಹೊಸ ರೂಪ, ಆಡಂಬರದ ಬಿಂಕ ಬಿನ್ನಾಣ ಮೈತೆತ್ತು ಉರಿ ಬದಲಾಗಿದೆಯೇ? ಜ್ವಾಲೆಗೆ ಹಳದಿ ಕೆಂಪು ಮಿಶ್ರಿತ ಹೊಳಪು ಕಂದಿದೆಯೇ? ಕಳೆಕುಂದಿದರೆ ಬೇಯಿಸುವ ಕೈಗಳು ಕೆಲಸ ಕಳೆದುಕೊಳ್ಳುತ್ತದೆ ಕೈಬಳೆಯ ನಿಟ್ಟುಸಿರ ಗಾಳಿಯೂ ದೀರ್ಘವಾಗುತ್ತದೆ...

ನರಕದ ತಳಾತಳದಲ್ಲಿರುವ ಸೀಮೆ. ಎಲ್ಲರೂ ಅಂದುಕೊಂಡಂತೆ ಅಲ್ಲಿ ನಿರಂಕುಶಾಧಿಕಾರಿಗಳಿಲ್ಲ. ಮಾತೃಹಂತಕರು, ಮಾತೃಗಾಮಿಗಳು, ಹೆಣಗಳನ್ನು ದರದರ ಎಳೆದಾಡಿದವರು, ದೇಶದ್ರೋಹಿಗಳು ಯಾರೂ ಇಲ್ಲ. ನರಕದ ತಳಾತಳ ಕಾಲವಿದರ ಆಶ್ರಯತಾಣ, ಎಲ್ಲೆಲ್ಲೂ ಕನ್ನಡಿಗಳು, ಸ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...