ರೊಟ್ಟಿ ಜಾರಿ ತುಪ್ಪದಲ್ಲಿ
ಬಿದ್ದರೆ-ಗೆಳತಿ
ರೊಟ್ಟಿಯ ತಪ್ಪೇನೆ

ರೊಟ್ಟಿ ಜಾರಿ ತುಪ್ಪದಲ್ಲಿ
ಬಿದ್ದರೆ-ಗೆಳತಿ
ತುಪ್ಪದ ತಪ್ಪೇನೆ

ರೊಟ್ಟಿಯದು ತಪ್ಪಿಲ್ಲ
ತುಪ್ಪದ ತಪ್ಪಿಲ್ಲ
ಯಾರದು ತಪ್ಪಿಲ್ಲ-ಗೆಳೆಯ
ಯಾರದು ತಪ್ಪಿಲ್ಲ


ರೊಟ್ಟಿ ಜಾರಿ ತುಪ್ಪದಲ್ಲಿ
ಬಿದ್ದರೆ-ಗೆಳತಿ
ತಟ್ಟಿದವರ ತಪ್ಪೇನೆ

ರೊಟ್ಟಿ ಜಾರಿ ತುಪ್ಪದಲ್ಲಿ
ಬಿದ್ದರೆ-ಗೆಳತಿ
ಕಾಸಿದವರ ತಪ್ಪೇನೆ

ತಟ್ಟಿದವರ ತಪ್ಪಿಲ್ಲ
ಕಾಸಿದವರ ತಪ್ಪಿಲ್ಲ
ಯಾರದು ತಪ್ಪಿಲ್ಲ-ಗೆಳೆಯ
ಯಾರದು ತಪ್ಪಿಲ್ಲ


ರೊಟ್ಟಿ ಜಾರಿ ತುಪ್ಪದಲ್ಲಿ
ಬಿದ್ದರೆ-ಗೆಳತಿ
ಕಂಡವರ ತಪ್ಪೇನೆ

ರೊಟ್ಟಿ ಜಾರಿ ತುಪ್ಪದಲ್ಲಿ
ಬಿದ್ದರೆ-ಗೆಳತಿ
ತಿಂದವರ ತಪ್ಪೇನೆ

ಕಂಡವರ ತಪ್ಪಿಲ್ಲ
ತಿಂದವರ ತಪ್ಪಿಲ್ಲ
ಯಾರದು ತಪ್ಪಿಲ್ಲ-ಗೆಳೆಯ
ಯಾರದು ತಪ್ಪಿಲ್ಲ


ರೊಟ್ಟಿಯ ಮೇಲೆ
ಹಿಡಿದವ-ಗೆಳತಿ
ಪುರಂದರ ವಿಠಲನೆ

ತುಪ್ಪವ ಕೆಳಗೆ
ಇಟ್ಟವ- ಗೆಳತಿ
ಅವನೂ ವಿಠಲನೆ

ಹಾಲು ಹೈನ ಅವನದೇ
ಹಿಟ್ಟುರೊಟ್ಟಿ ಅವನದೇ
ನಮ್ಮದು ಏನಿಲ್ಲ-ಗೆಳೆಯ
ನಮ್ಮದು ಏನಿಲ್ಲ
*****