
ಜಂಗಮ ಹಸಿವೆಗೆ ಆಲಯ ಕಟ್ಟುವುದು ಬೇಕಿಲ್ಲ. ಆಜ್ಞೆಗೆ ರೊಟ್ಟಿ ಕಿವಿಗೊಟ್ಟಿದೆ ಮನಸು ಕೊಟ್ಟಿಲ್ಲ. ಜಂಗಮದ ಬಯಲಲಿ ಸ್ಥಿರ ಆಲಯ ಕಟ್ಟುತ್ತದೆ. ರೊಟ್ಟಿ ಅಳಿಯುತ್ತದೆ ಸೃಷ್ಟಿಯಂತಿಮ ಸತ್ಯದ ಸ್ಥಾವರ ಉಳಿಯುತ್ತದೆ. *****...
ಏನಿದೆನ್ನಯ ಕಾವ್ಯ ? ವ್ಯಾಕುಲತೆಯೊತ್ತಡವೋ ? ಆನಂದದುಮ್ಮಳವೋ ? ಆಳ್ತನದ ವೈಭವವೋ ? ಎನ್ನುಸಿರ ಬಿಸಿಗೆಷ್ಟು ಹಸುರಡಗುವುದೋ ? ಮನದೊಳೆಷ್ಟೊಂದು ಪರಿ ಪ್ರಶ್ನೆಯುದಿಸಿದರು ಎನ್ನ ಬದುಕಿನನಿವಾರ್‍ಯವೀ ನಿಟ್ಟುಸಿರು – ವಿಜ್ಞಾನೇಶ್ವರಾ *****...
ಕಟ್ಟಿಸಿದ ನಲ್ಲೆಗಾಗಿ ಷಹಜಹಾನ್ ತಾಜ್ಮಹಲ್ಲು ಕಟ್ಟಿಸುವೆ ನಲ್ಲೆ ನಿನಗಾಗಿ ಚಿನ್ನದ ಹಲ್ಲು *****...
ಕಡಲ ತಡಿಯಲ್ಲಿ ನಿಂತು ವಿರುದ್ಧ ಮುಖವಾಗಿ ಚಿತ್ತೈಸಿದರೆ ಎಂಥ ಸಹಜತೆ ಲ್ಯಾಂಡಸ್ಕೇಪ್ ಮಾಡಿದ ಮಹಾನ್ ತೋಟಗಾರನೊಬ್ಬ ಅಂಚಂಚನ್ನು ಬಿಡದೆ ಕಲೆಯ ಗ್ಯಾಲರಿಯನ್ನೆ ಇಳಿಬಿಟ್ಟ ಹಾಗೆ. ನೋಡುತ್ತ ಮೈಮೇಲೆ ಗೂಸಬಮ್ಸಗಾಗಿ ಕಾದೆ. ಗಗನ ಚುಂಬಿ ಕಟ್ಟಡದ ಏರುವ ಇಳ...
ನಿನ್ನ ದುಗುಡದ ಒಡಲಿಗೆ ನಲಿವು ಸುರಿಯುವ ಕಾಲ ಇಲ್ಲೇ ಎಲ್ಲೋ ಕಾಲು ಚಾಚಿಕೊಂಡು ಮಲಗಿದೆ *****...
ತವರೂರ ಹಾದಿಯಲಿ ಹೂವು ಚೆಲ್ಲಿ ಎನ್ನ ಮನೆಯ ಬೆಳಗುವಲ್ಲಿ ಹೊನ್ನ ಕುಡಿಯ ತಾರೆಂದು ಒಡಲ ಮಡಿಲ ತುಂಬಿ ಬಾರೆಂದು ಹೇಳಿ ಹೋದಿರಿ! ಎನ್ನ ಸಖಾ ನಾನಿಲುವೇನೆ || ನಿಮ್ಮ ಮನೆಯ ಬೆಳಗುವ ದೀಪವೆಂದೂ ಆರದೆ ಉಳಿಸುವೆ ನಿಮ್ಮದೇ ಭಾವದುಸಿರಲಿ ನಿಮ್ಮ ಒಲವ ಕಾಯುವ...













