ಪ್ರೀತಿಯ ಪಳಿಯುಳಿಕೆಯ ಮೇಲೆ ಸಣ್ಣ ಜೋಪಡಿ ಕಟ್ಟಿ ಸುತ್ತ ಗುಲಾಬಿ ಗಿಡ ನೆಟ್ಟಿದ್ದೇನೆ. ಎದೆಗನ್ನಡಿ ದೇವದಾರು ಚೌಕಟ್ಟಿಗೆ ಅವುಚಿಕೊಂಡಿದೆ.. ತಿಂಗಳ ಬೆಳಕಿಗೆ ಬರದಿರಲಿ ಬೆಂಕಿಯುಗುಳುವ ಖಯಾಲಿ. ಮಾತು ಕತೆ ಸತ್ತ ದಿನಗಳಲ್ಲೂ ದೇಹವೇ ದಾಸ್ತಾನಿನ ಕೋಣ...

ಎಲ್ಲೋ ಕಳಕೊಂಡ ಖಾಲಿ ಪುಟವ ನಿನ್ನ ಕಣ್ಣಲ್ಲೇ ಹುಡುಕುವ ಹಟವ ಕೊಂದುಬಿಡಬೇಕೆಂದಿದೇನೆ ಗೆಳತಿ, ಎಲ್ಲರಂತೆ ಬದುಕುವ ಚಟವ ನನ್ನದಾಗಿಸಿಕೊಳ್ಳುವ ಸಲುವಾಗಿ! *****...

ಇಬ್ಬರು ಕಳ್ಳರು ಊರನ್ನು ದೋಚಿದರು. ರೈತರ ಕತ್ತು ಮುರಿದರು. ಒಬ್ಬ ಹಸಿದ ತೋಳದಂತೆ ತೆಳ್ಳಗಿದ್ದ. ಇನ್ನೊಬ್ಬ ಜಗದ್ಗುರುವಿನಂತೆ ದಪ್ಪಗಿದ್ದ. ಇಬ್ಬರು ಕಳ್ಳರಲ್ಲಿ ಅಷ್ಟೇಕೆ ವ್ಯತ್ಯಾಸ? ಅವರಲ್ಲೊಬ್ಬ ಒಡೆಯ, ಇನ್ನೊಬ್ಬ ಗುಲಾಮ. ಒಡೆಯ ಕೆನೆಹಾಲು ಕುಡ...

ನೀ ಬಾರದೇ ಮನವು ಕಾಡಿದೇ ಬರಡಾದ ಜೀವಕೆ ಬಯಕೆಗಳೂ ಮೂಡದೇ || ಪ್ರೀತಿಯ ಅರಿಯೆ ಎಂದೂ ಪ್ರಿಯತಮನೇ ನೀನೇ ಎಂದು ಬಯಸಿ ಬಂದೆ ರಾಧೆ ನಾನು ಕೈ ಹಿಡಿದು ನಡೆಸುವಾತ ನೀನೇ ಎಂದೂ || ನನ್ನಲ್ಲಿ ನಿನ್ನ ನಿಲುವಿರಲು ನಿನ್ನಲ್ಲಿ ನನ್ನ ಒಲವಿರಲು ಮನವೆಂಬ ಹಕ್ಕ...

ವಾಸ-ನಾಲ್ಕು ಪುಟಗಳ ಮಧ್ಯೆ ಭಾಷೆ-ವ್ಯಾಕರಣ ಸೂತ್ರಗಳ ಮಧ್ಯೆ ಗಡಿ ಮಡಿಗಳ ಇಕ್ಕಟ್ಟಿನೊಳಗೆ ಹೀಗೆ ಬಿಕ್ಕಟ್ಟಿಗೆ ಸಿಕ್ಕು ಬಾಳಿದರೂ ತರ್ಕದ ತಲೆಮೆಟ್ಟಿ ಹಾಡುತ್ತದೆ ಕಟ್ಟು ಮೀರಿ ಹುಟ್ಟುವ ಪದ್ಯದ ಸತ್ಯ. ಅದರ ದನಿ – ಬಳೆ ನೂಪುರ ಕಾಲುಂಗರ, ಕಳ...

ಸುತ್ತಿದ್ದೇನೆ ಎಷ್ಟೋ ನಾಡು ಅಲೆದಿದ್ದೇನೆ ಕಾಡು ಮೇಡು ಉಂಟು ತಾನೆ ಹೊಟ್ಟೆ ಪಾಡು ಆದರೂನು ಕಾಡುವುದು- ಮತ್ತೆ ಅದೇ ನೆನಪು ನೋಡ್ರಿ ಹೇಳುವಂಥ ಊರಲ್ರಿ ಒಳ್ಳೆ ಒಂದು ಹೋಟೆಲಿಲ್ರಿ ಇದ್ದರೂನು ಬೇಕು ಚಿಲ್ರಿ ಆದರೂನು ಕಾಡುವುದು- ಮತ್ತೆ ಅದೇ ನೆನಪು ನ...

ಏನ್ಚಂದ ಏನ್ಚಂದ ನಮ್ಮೂರ ಕಾಲೇಜು ಹನುಮಂತ ದೇವ್ರಾಂಗ ಮುದ್ದು ಯವ್ವಾ ಹುಡುಗೋರು ಮುದುಮುದ್ದ ಹುಡಿಗೇರು ಸುದಸುದ್ದ ಕಲಸೋರು ಕಲಸಕ್ರಿ ಕಣ್ಣಿಯವ್ವಾ ||೧|| ಲೈಬ್ರೀಯ ಪುಸ್ತೋಕು ಲೈಬ್ರ್ಯಾಗ ಕುಂತಾವ ಕುಂತಾರ ಹುಡುಗೋರು ಗೇಟಿನ್ಯಾಗ ಥೇಟ್ ಥೇಟ ಕಾಮಣ್...

ಈ ದೇಹವು ನಿನ್ನದೇ ಈ ಪ್ರಾಣವು ನಿನ್ನದೆ| ನನ್ನ ಜೀವನದಲಿ ನೀ ಯಾವ ನಿರ್ಧಾರವನು ನಿರ್ಧರಿಸಿದರೂ ಸರಿಯೇ ನಾನು ನಿನ್ನವನೆಂಬ ಆತ್ಮವಿಶ್ವಾಸವಿದೆ ಎನಗೆ|| ನಾನು ನಿಂತಿಹ ಈ ನೆಲ, ಕುಡಿಯುತಿಹ ಈ ಜಲ ಸೇವಿಸುತಿಹ ಗಾಳಿ ಇದೆಲ್ಲದು ನಿನ್ನದೇ| ನಿನ್ನ ಪಂಚ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...