ನೀ ಬಾರದೇ

ನೀ ಬಾರದೇ
ಮನವು ಕಾಡಿದೇ
ಬರಡಾದ ಜೀವಕೆ
ಬಯಕೆಗಳೂ ಮೂಡದೇ ||

ಪ್ರೀತಿಯ ಅರಿಯೆ ಎಂದೂ
ಪ್ರಿಯತಮನೇ ನೀನೇ ಎಂದು
ಬಯಸಿ ಬಂದೆ ರಾಧೆ ನಾನು
ಕೈ ಹಿಡಿದು ನಡೆಸುವಾತ ನೀನೇ ಎಂದೂ ||

ನನ್ನಲ್ಲಿ ನಿನ್ನ ನಿಲುವಿರಲು
ನಿನ್ನಲ್ಲಿ ನನ್ನ ಒಲವಿರಲು
ಮನವೆಂಬ ಹಕ್ಕಿ ಹಾಡೆ
ಕುಣಿ ಕುಣಿದು ನಾನು ದಣಿದೆ ||

ಹಾದಿ ಬೀದಿಯಲಿ
ಕೃಷ್ಣಾ ನಿನ್ನ ಸಖಿಯರಲ್ಲಿ
ವಿರಹವ ತೋಡಿಕೊಂಡೆ
ಯಾರು ಹೇಳುವರಿಲ್ಲ ಕೇಳುವರಿಲ್ಲ ||

ರಾಧೆನಾ ಕೃಷ್ಣ ನಿನ್ನ ಮೊರೆ
ಹೋಗಲು ಬಿಗುಮಾನವೇಕೊ
ಪ್ರೀತಿಯ ಕರೆಗೆ ಪ್ರೇಮಾಗ್ನಿಯಲಿ
ಬೆಂದ ಬೂದಿಯನು ತಿಲಕವಾಗಿರಿಸಿದೇ ಕೃಷ್ಣಾ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಡುಗಡೆ
Next post ಕಳ್ಳ ಮತ್ತು ಸೇವಕ

ಸಣ್ಣ ಕತೆ

 • ಗೃಹವ್ಯವಸ್ಥೆ

  ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

 • ಹೃದಯದ ತೀರ್ಪು

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

 • ಅವನ ಹೆಸರಲ್ಲಿ

  ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

 • ಬೂಬೂನ ಬಾಳು

  ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

 • ಮಲ್ಲೇಶಿಯ ನಲ್ಲೆಯರು

  ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…