ಕಾಸರಗೋಡು

ಸುತ್ತಿದ್ದೇನೆ ಎಷ್ಟೋ ನಾಡು
ಅಲೆದಿದ್ದೇನೆ ಕಾಡು ಮೇಡು
ಉಂಟು ತಾನೆ ಹೊಟ್ಟೆ ಪಾಡು
ಆದರೂನು ಕಾಡುವುದು-
ಮತ್ತೆ ಅದೇ ನೆನಪು ನೋಡ್ರಿ

ಹೇಳುವಂಥ ಊರಲ್ರಿ
ಒಳ್ಳೆ ಒಂದು ಹೋಟೆಲಿಲ್ರಿ
ಇದ್ದರೂನು ಬೇಕು ಚಿಲ್ರಿ
ಆದರೂನು ಕಾಡುವುದು-
ಮತ್ತೆ ಅದೇ ನೆನಪು ನೋಡ್ರಿ

ಧೂಳು ಬಿಸಿಲು ಸೊಳ್ಳೆಕಾಟ
ತೆಂಗು ಬಿಟ್ಟರಡಿಕೆ ತೋಟ
ರಾತ್ರಿ ಹಗಲು ಕುಚ್ಚಿಲೂಟ
ಆದರೂನು ಕಾಡುವುದು-
ಮತ್ತೆ ಅದೇ ನೆನಪು ನೋಡ್ರಿ

ಕಡಲ ತೀರ ಅಷ್ಟು ದೂರ
ದಾರಿಯಂತು ಇಲ್ಲ ನೇರ
ಎಳೆವರಾರು ಅಲ್ಲಿ ತೇರ ?
ಆದರೂನು ಕಾಡುವುದು-
ಮತ್ತೆ ಅದೇ ನೆನಪು ನೋಡ್ರಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲವ್ ಟೆರರಿಸ್ಟ್‌ಗಳಿದ್ದಾರೆ ಹುಡುಗಿಯರೆ ಹುಷಾರು…
Next post ಸಂಸಾರ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…