ದೇವರೆಲ್ಲಿ ಎಂದು ಊರೂರು ನೋಡುವೆಯೇನು? ಪಶು-ಪಕ್ಷಿ ಗಿಡ-ಮರ ಪರಿಸರದಲ್ಲಿರುವನು ಅವುಗಳ ರಕ್ಷಿಸು ದೇವರೊಲಿವನು ನೋಡಾ! ಅವಳಿಯೆ ನಿನ್ನಳಿವು ಖಂಡಿತಾ ಮೂಡಾ! *****...

ನೀನು ಯೌವನದೊಡನೆ ಕೂಡಿಕೊಂಡಿರುವಾಗ ಕನ್ನಡಿಯು ನನ್ನ ವಯಸ್ಸನ್ನೆ ತೋರಿಸದು, ಆದರೀ ನಿನ್ನ ಹಣೆಯೊಳು ನೆರಿಗೆ ಕಂಡಾಗ ಇನ್ನು ಮುಗಿಯಿತು ನನ್ನ ಕಾಲ ಎನಿಸುವುದು ನಾ ನಿನ್ನೊಳಿರುವಂತೆ ನೀನಿರುವೆ ನನ್ನೊಳಗೆ, ನಿನ್ನ ಮೈಚೆಲುವೆಲ್ಲ ನನ್ನ ಆತ್ಮದ ತೊಡಿಗ...

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಸಾಗಿ ಮಾಗಿ ಒಂದುಗೂಡಿ ಬಾಳಲೇ ಬೇಕು ಸಹಜವಾಗಿ ಸತಿ ಪತಿಯರ ಜೀವನವಾಗಿ ಬಾಳಿಗೊಂದು ಜೋಡಿ ಇದುವೆ ಜೀವ ನಾಡಿ ಜೀವಕ್ಕೆ ಜೀವ ಇದುವೆ ಬದುಕಿನ ಭಾವ ಸರಸ ವಿರಸಗಳ ಮಧ್ಯೆ ಸಮರಸ ಜೀವನ ಕಷ್ಟ ಸುಖ ಹಂಚಿಕೊಂಡು ಬದುಕುವ ಜೋಡಿ....

ಇಂದು, ನೀ ಬರೆದ ಪತ್ರವದು ಬಂದು ತಲುಪಿತು ಇಂದು ಸಂತಸದ ನೆನಪನ್ನು ಅಗಲಿಕೆಯ ಅಳಲನ್ನು ತುಂಬಿ ತಂದಿತು ಇಂದು. ವಿದ್ಯೆಗೆ ಬುದ್ಧಿಗೆ ಪುರಸ್ಕಾರ ಕೊಟ್ಟ ಬ್ಯಾಂಕಿಗೆ ನಮಸ್ಕಾರ ಎಂದು ಹೇಳುತ್ತಾ ನಾನು, ಒಳ ಬಂದೆನಂದು ಅಕ್ಟೋಬರ್ ತಿಂಗಳ ಹದಿನೆಂಟರಂದು....

ಖುಶಿ ಖುಶಿ ಹರೆಯಾವು ಕಸುವಿಂದ ಬಂದೇತೆ ವಡಪೇಳ ಈರಣ್ಣ ವಡಪೇಳ ||ಪಲ್ಲ|| ಗುಗ್ಗೂಳ ಎಂದ್ಹೇಳ ಶಸ್ತ್ರಾವು ಎಂದ್ಹೇಳ ಗರತೇರ ಮನಿಮನಿಗೆ ಕರಿತೇನ ಹೊಸ್ತಿಲಕ ಒಂದ್ಹೆಣ್ಣ ಮುತ್ತೈದಿ ಹೇಳ್ತೇನ ನಿನಗುಡಿಗೆ ಬಜಂತ್ರಿ ತರತೇನ ||೧|| ಜರತಾರಿ ನಾರ್‍ಯಾರ ಮು...

ಮಾನವೀಯತೆ, ಏನಾಗಿದೆ ನಿನಗೆ? ಹೀಗೇಕೆ ನಡುಬೀದಿಯಲಿ ಮೌನವಾಗಿ ಮಲಗಿರುವೆ, ಸತ್ಯಕ್ಕೆ ಜಯವೆಂಬ ನಿನ್ನ ವಾಕ್ಯ ಏನಾಯಿತಿಂದು? ನಿನ್ನ ಸಂಗಾತಿಗಳೆಲ್ಲ ಇಂದು ಯಾಕೆ ಪಕ್ಷಾಂತರ ಮಾಡಿದರು? ಈ ಕೊರಗಿನಲ್ಲಿಯೇ ನೀನು ಸ್ವರಗಿ ಹೋಗುತ್ತಲಿರುವೆಯಾ? ನೆಲದಲಿ ಹ...

ಲಾಬಿ ಮಾಳ್ವಂದದಾ ಗುಲಾಬಿಯೊಳಿಪ್ಪ ಗಂಭೀರ ಮುಳ್ಳಿನಾ ತೆರದಿ ಗಾಬರಿಯ ಕಷ್ಟಗಳು ಸಾವಯವ ವೆಂಬೊಂದು ಕೃಷಿಯೊಳಗೆ ಲೋಭದೊಳಾಯ್ಕೆ ಫಲಿಸದು – ವಿಜ್ಞಾನೇಶ್ವರಾ *****...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...