ಕಾಲದ ಹಸಮಣೇ ಮ್ಯಾಲೆ ಕುಂತ್ಯಾಳೆ ಕಣೆ ನಮ್ಮವ್ವ ಅರಿಶಿನ ಕುಂಕುಮವಿಟ್ಟು ಇದು ಗೋಧೂಳಿ ಸಮಯ || ಆಕಾಶ ಚಪರ ಚಿಲಿಪಿಲಿ ಇಂಚರ ಗಿಳಿ ಕೋಗಿಲೆ ರಾಗ ಮಧುರ ಮೆರವಣಿಗೆ ದಿಬ್ಬಣ ನಡೆದಾವೋ ||ಇ|| ನಕ್ಷತ್ರ ಸಖಿ ಚಂದ್ರಮ ಸೋದರ ಸೂರ್ಯನ ಅಕ್ಕರೆ ಮಿಂದಾಗ ವರ ...

ಮಾಘದ ಚಳಿಯಲ್ಲಿ ತನು ನಡು ನಡುಗುತ್ತಿರೆ ದೀಪನೆ ಬೆಚ್ಚನೆಯ ಉಸಿರು ನೀಡುವಂತೆ ಕಷ್ಟ ಕಷ್ಟಗಳ ಹೋರಾಟದಲ್ಲಿ ಸೋಲುತಿದೆ ಹರಿ ನಿನ್ನ ಕೃಪೆಯೊಂದೆ ಗೆಲುವು ತರುವಂತೆ ಹೆಜ್ಜೆ ಹೆಜ್ಜೆಗೂ ಬಾಳಿನಲ್ಲಿ ಅಪಾಯ ಆ ಅಪಾಯಗಳಿಗೆ ನೀನೆ ಉಪಾಯ ನಿನ್ನೊಂದು ಒಲವು ನ...

ನಿದ್ದೆ ಒಂದು ಪುಟ್ಟಸಾವು ದಣಿದ ಜೀವಕದುವೆ ಚಿಕ್ಕ ಬಿಡುವು| ದಿನದ ಎಲ್ಲಾ ಭಾರವ ಇಳಿಸಿ ತನು ತೂಗುಯ್ಯಾಲೆಯದೆಯಲಿ ತೇಲಿ ಮನಕೆ ನೀಡುತಿದೆ ನಲಿವು|| ಎಷ್ಟು ಕಠಿಣ ದಿನದ ಬದುಕು| ತುಂಬಲು ತುತ್ತಿನ ಚೀಲವ ದಿನಾ ಹೊಸತ ಹುಡುಕು| ಸೂರ್ಯನುದಸಿದ ಕ್ಷಣದಿಂ...

ಪರಚಿಕೊಂಡ ಪರಿಚಯದ ರಸ್ತೆ ಉರುಳು ತ್ತವೆ ಒಂದೇಸಮ ಮೈಮೇಲೆ ಅಟ್ಟಹಾಸದ ಸರಕು ಬದುಕು ಬಿರುಕು ಹೊತ್ತು ಗೊತ್ತಿಲ್ಲದೆ ಕತ್ತು ಕುಯ್ಯುತ್ತವೆ ಪೆಡಸ್ಟ್ರ್‍ಐನಿನಲ್ಲಿ ಪೋಲೀಸನ ಕೈಗೇ ಕೈಕೊಟ್ಟು ನುಗ್ಗುತ್ತವೆ ಕಾಲ ಚಕ್ರದ ಕೆಳಗೆ ಕರುಳ ಕಣ್ಣೊಡೆದು ಕೆಂಪು...

ಸ್ವಾಮಿ ಬಾರೊ ನಿಸ್ಸೀಮ ಬಾರೊ ಶಿವ ಕಂದ ಬಾರೊ ಬಾರೊ ಜಗದ ಕೀರ್ತಿ ಕಾರ್ತೀಕ ಬಾರೊ ಜಗದಂಬೆ ಕುವರ ಬಾರೊ || ೧ || ಕೊರಡು ಚಿಗುರಿ ಕವಲಾಗಿ ಜೀವಸೆಲೆ | ಎಲೆ ಹೂವು ಹಣ್ಣು ಬರಲಿ ಬರಡು ಭೂಮಿ ಹಸಿರಾಗಿ ಉಸಿರಿಸಲಿ | ಕುಸುರುಕಾಳು ತರಲಿ || ೨ || ಶವದಿ ...

ಬೊಲೀವಿಯಾ ಆ ಒಂದು ಹೆಸರಿಗೇ ಎದು ಕುಳಿತಿದ್ದೆನಲ್ಲ! ನಿದ್ದೆಗಣ್ಣುಗಳ ಹಿಸುಕಿ- ಏನದಕ್ಷರವೊ ಪಠ್ಯಪುಸ್ತಕದ ನಡುವೆ ಯಾವೊಬ್ಬ ಅನಾಮಿಕ ಬರಹಗಾರ ಕಲ್ಪಿಸಿದ ಉಪಮೆಯೊ ರೂಪಕವೊ ಸಂಕೇತವೊ ಪ್ರತಿಮೆಯೊ ಪ್ರತೀಕವೊ ಕಪ್ಪು ಮಸಿಯ ಆ ಕೆಟ್ಟ ಚಿತ್ರದಲ್ಲೂ ಎದ್ದ...

ಅಪ್ಪಾಜಿ ಅಪ್ಪಾಜಿ ಎಲ್ಲಿಗೆ ಹೋಗಿದ್ದೆ? ಆಡಲು ನಿನಗೆ ಹುಣ್ಣಿಮೆ ಚೆಂಡನು ತರಲು ಹೋಗಿದ್ದೆ ಅಪ್ಪಾಜಿ ಅಪ್ಪಾಜಿ ಹೇಗೆ ಹೋಗಿದ್ದೆ? ಮೋಡವನೇರಿ ತಾರೆಗಳೂರಲಿ ಹುಡುಕಿ ಹೋಗಿದ್ದೆ ಅಪ್ಪಾಜಿ ಅಪ್ಪಾಜಿ ಮೋಡವೆಲ್ಲಿ ಈಗ? ನನ್ನನು ಇಳಿಸಿ ತನ್ನಯ ಊರಿಗೆ ಹಾರ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...