ಕಾಲದ ಹಸೆಮಣೆ

ಕಾಲದ ಹಸಮಣೇ ಮ್ಯಾಲೆ
ಕುಂತ್ಯಾಳೆ ಕಣೆ ನಮ್ಮವ್ವ
ಅರಿಶಿನ ಕುಂಕುಮವಿಟ್ಟು
ಇದು ಗೋಧೂಳಿ ಸಮಯ ||

ಆಕಾಶ ಚಪರ ಚಿಲಿಪಿಲಿ ಇಂಚರ
ಗಿಳಿ ಕೋಗಿಲೆ ರಾಗ ಮಧುರ
ಮೆರವಣಿಗೆ ದಿಬ್ಬಣ ನಡೆದಾವೋ ||ಇ||

ನಕ್ಷತ್ರ ಸಖಿ ಚಂದ್ರಮ ಸೋದರ
ಸೂರ್ಯನ ಅಕ್ಕರೆ ಮಿಂದಾಗ
ವರ ಪೂಜೆ ನಡದ್ಯಾವೋ ||ಇ||

ಹಾದೀಲಿ ಹೂವು ಹಾಸಿದವು
ಓಕುಳಿ ಬಣ್ಣ ಎರಚಿದವು
ಹೆಜ್ಜೆ ಹೆಜ್ಜೆ ಜೀವನ ಕುಣಿದಾವೋ ||ಇ||

ಬಾನಾಡಿಗಳ ರಂಗೋಲಿ
ಹೂವು ಮಲ್ಲಿಗೆ ಮಂದಾರ ಬೀರಿ
ಜೋಗುಳ ಹಾಡಿ ತೂಗ್ಯಾವೋ ||ಇ||

ಮಧುವಣಗಿತ್ತಿ ಸಿಂಗಾರ
ಋತು ಚಕ್ರಧಾರೆ ಹೂ ಮಾಲೆ
ಸಂವತ್ಸರ ಅಕ್ಷತೆ ಎರಚ್ಯಾವೋ ||ಇ||

ಬೆಳದಿಂಗಳ ಮೈ ಚಾಚಿ
ಬೆಳ್ಳಕ್ಕಿ ತಾರಾ ಮುತ್ತಿನಾರತಿ ಎತ್ತಿ
ಕರಮುಗಿದು ಶರಣೆಂದ್ಯಾವೋ ||ಇ||

ಬದುಕು ಬವಣೆ ಗೂಡಕಟ್ಟಿ
ಪ್ರಕೃತಿ ಮಡಿಲ ತುಂಬಿ
ಕಾಯಕಲ್ಪ ಹಾಡ್ಯಾವೋ ||ಇ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೂರ್ವಗ್ರಹ
Next post ಬಾಳ ದಿಬ್ಬಣ

ಸಣ್ಣ ಕತೆ

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

 • ವಲಯ

  ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

 • ಗದ್ದೆ

  ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

 • ಆವರ್ತನೆ

  ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

 • ಬಲಿ

  ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…