ಕಾಣುವ ಕಣ್ಣಿಗೆ ಇರುವಳು ರುಕ್ಮಿಣಿ ಕೃಷ್ಣನ ಬದಿಯಲ್ಲಿ; ರಾಧೆಯು ಎದೆಯಲ್ಲಿ. ಬಲ್ಲವರಾರು ಇರುವವರೆಂದು ರುಕ್ಮಿಣಿ ಎದೆಯಲ್ಲಿ; ಕೃಷ್ಣನ ಗಾಳಿಯಲಿ! || ತುಟಿಯಲಿ ರಾಮ ಮನದಲಿ ಕೃಷ್ಣ ಇದು ಗಂಡಿಗೆ ಪ್ರೀತಿ; ನಾವೊಪ್ಪಿದ ರೀತಿ. ನುಡಿಯದೆ ಹೋದ ಮಾತುಗಳ...

ಇವಳೇ… ಕ್ಷಮಿಸು ಇತ್ತೀಚೆಗೆ ಯಾಕೋ… ನೀನು ನನಗೆ ಏನೂ ಅನಿಸೋದೆ ಇಲ್ಲ ಬಂಧನ ಸವಿ ಕಳೆದಿದೆ ಹೊರೆಯಾಗಿದೆ ಹಾಗಂತ… ನಿನ್ನ ನಡೆ ನುಡಿ ಬಗ್ಗೆ ಎರಡಿಲ್ಲ, ಆದರೂ ಯಾಕೋ ನಿನ್ನ ಯಾವುದೂ ಸುಖ ಕೊಡ್ತಿಲ್ಲ ಕೂಡಿದ್ದು ಕೊಂಡೇ ಕಂಡಾಟ ಆಡ...

ಸೀರೆ ಸುತ್ತಿಕೊಳ್ಳುವಾಗ ದ್ರೌಪದಿ ಉಂಗುರ ಎತ್ತಿಕೊಳ್ಳುವಾಗ ಶಕುಂತಲೆ ಒಲೆ ಹೊತ್ತಿಕೊಳ್ಳುವಾಗ ಸೀತೆ ಯಾಕೆ, ಯಾಕೆ ನೆನಪಾಗಬೇಕು? ಕೆರೆಯ ಏರಿಯ ಮೇಲೆ ಭಾಗೀರಥಿ ಎಡವಿದ ಕಲ್ಲುಗಳಲ್ಲಿ ಒಬ್ಬಬ್ಬಳೂ ಮಹಾಸತಿ ಯಾಕೆ, ಯಾಕೆ ಕಾಣಬೇಕು? ಚಿತೆಯಿಂದ ಎದ್ದು ...

ಛೇ ಛೇ ಅಸ್ತವ್ಯಸ್ತ ಅಶ್ಲೀಲ ಹಿಂಸೆ ಕ್ರೌರ್ಯದ ಖಂಡನೆ ಉಪ್ಪುಂಡ ದೇಹದ ಬಯಕೆಯ ನಾಗಾಲೋಟಕೆ ತಡೆವುಂಟೆ? ತರುಣ ತರುಣಿಯರ ಸುಪ್ತಬಯಕೆ ಹೆಪ್ಪುಗಟ್ಟಿ ತಡೆಯದೇ ಅಡ್ಡ ಹಿಡಿದ ಮನ ಪಥ ಭ್ರಮಣೆಯಾಗಿ ರಸ್ತೆಗಿಳಿದು ಹಾಕಿತು ಪ್ರೇಮದ ಸೋಗು ಬಿಗಿ ಜಿನ್ ಮಿನಿಸ...

ವಾಲ್ಮೀಕಿ ಕುಮಾರವ್ಯಾಸ ಯಾರೂ ಒದಗಿಸಲಿಲ್ಲ ಹೆಣ್ಣಿಗೆ ನ್ಯಾಯ. ಅದಕ್ಕೇ ತಪ್ಪಲಿಲ್ಲ ಅವಳಿಗೆ ಸತತ ಅನ್ಯಾಯ. ಪತಿಯೇ ಪರದೈವವೆಂದು ಸೀತೆಯ ಶೋಷಿಸಿದರು; ಸಹೋದರ ಭಕ್ತಿಯೆಂದು ಊರ್ಮಿಳೆಯ ಶೋಷಿಸಿದರು; ಮಲತಾಯಿಯೆಂದು ಕೈಕೇಯಿಯ ಶೋಷಿಸಿದರು; ಸೇಡು ಎಂದು ...

“ಬಾರದಿರು ನಾನೂರು ಗೋವುಗಳು ಸಂಖ್ಯೆಯಲಿ ನಾಲ್ಕು ಸಾವಿರವಾಗಿ ನಲಿದಾಡುತಿರುವನಕ” ಎಂಬ ಗುರುವಾಣಿಯನು ನಿನ್ನ ತಲೆಯಲಿಹೊತ್ತು ಏಕೆ೦ದು ಏನೆಂದು ಮರುಮಾತನಾಡದೆಯೆ ಧೇನುಗಳ ಮುಂಕೊಂಡು ಹಿಂದುಮುಂದಿಲ್ಲದೆಯೆ ಗುರು ದೈವ ಸಮವೆಂದು ಅವನ ಒತ್...

ಹೃದಯ ಮಂದಿರದಲೊಂದು ಮೂರ್ತಿಯನು ಕಲ್ಪಿಸಿ | ಭಕ್ತಿ ರಸ ಕುಸುಮದಿಂದ ನಿನ್ನ ಪೂಜಿಪೆ ತಂದೆ ||೧|| ನನಗಿಲ್ಲ ಧನ ಧಾನ್ಯ ನಾನಲ್ಲ ಜಗ ಮಾನ್ಯ | ಪುಣ್ಯ ಕ್ಷೇತ್ರಕ್ಕೆ ಹೋಗಿ ನಿನ್ನ ಸೇವೆಯ ಮಾಡಿ | ಸುಖ ಗಳಿಸುವಾ ಭಾಗ್ಯ ಎಸಗಿಲ್ಲ ತಂದೆ ||೨|| ಜನ ಸೇವ...

ನಾವು ಊಹಿಸಿರಲಿಲ್ಲ ನಮ್ಮ ಸ್ನೇಹ ಕೂಡುವುದೆಂದು ನಾವು ನೆನೆಸಿರಲಿಲ್ಲ ಬಂಧನ ಬೆಸೆಯುವದೆಂದು. ಮನಸ್ಸುಗಳು ಒಂದಾಗಿ ಮಧುರತೆಯು ಜೀವವಾಗಿ ಮಮತೆಯ ಒಡಲಾಗಿ ಸವಿ ಜೇನ ಖಣೀಯಾಗಿ. ಅದೇನೋ ಆಶ್ಚರ್ಯ ಎಲ್ಲಿಯದೋ ಸಂಬಂಧ ಮಾಡಿತ್ತು ಬಿಡಿಸದಾ ಬಂಧ ಜನ್ಮ ಜನ್ಮ...

ಇಲ್ಲಿ ಈ ಮರ್ತ್ಯಲೋಕದಲ್ಲಿ ಇರುವೆಯಾಕಳಿಕೆ ಮಿಡತೆ ನರಳಿಕೆ ಎರೆ ಹುಳುವಿನ ತೆವಳಿಕೆ ಕ್ಷಣವೂ ಎವೆ ಇಕ್ಕದೇ ದಾಖಲಾಗುವ ಈ ಅನಾದಿಯಲ್ಲಿ ಇರುವೆ ಹೆಜ್ಜೆ ಮೇಲೊಂದು ಹೆಜ್ಜೆ ಮಿಡತೆ ಮೇಲಿನ್ನೊಂದು ಮಿಡತೆ ಸತ್ತ ಎರೆಹುಳುವಿನ ದಾಖಲೆ ಮುರಿಯಲಿನ್ನೊಂದರ ಸಿ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...