ನಲವತ್ತು ವರ್ಷಗಳ ಅನಂತರ
ಭೇಟಿಯಾದರು
ಪರಮಾಪ್ತ ಗೆಳೆಯರು
ಬಾಲ್ಯ ಯೌವನ ನೆನೆಸಿಕೊಂಡು
ಮನಸಾರೆ ನಕ್ಕರು.
“ನಮ್ಮ ಸಹಪಾಠಿ ರೂಪ,
ಈಗ ಎಲ್ಲಿದ್ದಾಳೋ ಪಾಪ”
ವಿಷಾದದನಗೆ ನಕ್ಕ
ಮೊದಲ ಮುದುಕ.
“ಅಡುಗೆ ಮನೇಲಿದಾಳೆ
ಆ ನನ್ನ ರೂಪ –
ನಿನ್ನ ಹೆಸರೆತ್ತಿದರೆ
ಅವಳಿಗೆ ಎಲ್ಲಿಲ್ಲದ ಕೋಪ!”
ಚುರುಕು ಮುಟ್ಟಿಸಿದ
ಎರಡನೆ ಮುದುಕ.
ಕಕ್ಕಾಬಿಕ್ಕಿಯಾದ ವೃದ್ದ
“ಇದೀಗ ಬಂದೆ” ಎಂದು ಎದ್ದ
ತಿರುಗಿನೋಡದೆ ಓಡಿದ!
*****
೧೦-೧೨-೧೯೯೨