ಸುವರ್ಣನಾಡಿನ ಸ್ವರ್ಣ ಮುಕುಟ | ಮಣಿ ದಾರಿಣಿ ಕನ್ನಡತಿಯೇ.
ಶ್ರೀಗಂಧದ ನಾಡಿನ ಚಂದದ ಮಾಲೆಯ | ಧರಿಸಿದ ಶಾರದೆಯೇ.
ಅರಿಶಿನ ಕುಂಕುಮ ಮುಖ ಮಂಡಲ | ಲೇಪಿತ ಸುಮಂಗಲಿಯೇ.
ಹಸಿರಿನ ವನರಾಸಿಯ ಜೀವದ ಜಲ | ಧಾರೆಯ ಓಡಲೋಳ್ ತುಂಬಿಹ ವರದಾಯಿನಿಯೇ.
ವೀರಾಧಿ ವೀರರ ತೋಳ್ಬಲದಲಿ ನೆಲೆಸಿಹ ಶಕ್ತಿ ಪ್ರಧಾಯಿನಿಯೇ.
ಸಾಹಿತ್ಯ ಸಂಗೀತಗಾರರ ನಾಲಿಗೆಯಲಿ ಸದಾ ನಲಿದಾಡುವ ಸರಸ್ವತಿಯೇ.
ನಾಟ್ಯ-ಶಿಲ್ಪ ಕಲಾ ವೈಭವವ ಕಾಲಡಿಮೆಟ್ಟಿನಿಂತ ಶಾಂತಲೆಯೇ.
ಕನ್ನಡ ಭಾಷೆಯ ಸ್ವರ ಸಾಮ್ರಾಜ್ಞಿ ಕರುಣಾಳು ಜನರ ತಾಯಿ ಭುವನೇಶ್ವರಿಯೇ.
ಇದೋ ನಿನಗೆ ವಂದನೆ- ವಂದನೆ ಅಭಿನಂದನೆ…
*****