ಭಾರತೀಯ ನಾರಿ,
ಪಾವಿತ್ರತೆಯ ಬಣ್ಣ ಸಾರಿ
ಗೋರಿಯಾಗುತ್ತಿರುವಳಿ೦ದು
ಹೃದಯ ಹೀನರ ನಾಡಲಿ
ಮಾರುಕಟ್ಟೆಯಲ್ಲಿಂದು
ಮಾರಾಟದ ಸರಕಾಗಿರುವಳು,
ಹೃದಯ ಹೀನರ ನಾಡಲಿ
ಕೇವಲ ವಸ್ತುವಾಗಿಹಳು.
*****