ಜ್ಯೋತಿ ಪುಂಜದ ಸೂಕ್ಷ್ಮ ರೂಪದ
ಜ್ಯೋತಿ ಕಂದನ ತೂಗುವೆ
ಸುತ್ತ ಮುತ್ತಾ ಜ್ಯೋತಿ ತುಂಬಿದ
ಜ್ಯೋತಿಯಾತ್ಮನ ತೂಗುವೆ

ಸೂರ್ಯನಾಚೆಗೆ ಚಂದ್ರನಾಚೆಗೆ
ಮುಗಿಲಿನಾಚೆಗೆ ತೂಗುವೆ
ಕಲ್ಪದಾಚೆಗೆ ಕಾಲದಾಚೆಗೆ
ಆಚೆಯಾಚೆಗೆ ತೂಗುವೆ

ಸೂರ್ಯಚಂದ್ರರು ಧರಣಿ ಮಗುವನು
ತೂಗುತಿರುವರು ಬಲ್ಲಿರಾ
ಶಿವನು ಬ್ರಹ್ಮನು ಆತ್ಮ ಕಂದನ
ತೂಗ ಬಂದರು ಕಂಡಿರಾ

ಆತ್ಮ ಕಂದನೆ ನಗುವ ನಂದನೆ
ನಿನಗೆ ಜೋಜೋ ಹಾಡುವೆ
ಮಧುರ ಸುಂದರ ಬೆಳಕು ತುಂಬಿದೆ
ಜ್ಯೋತಿ ಜೋಜೋ ಹೇಳುವೆ
*****