ಬಟ್ಟೆಯದೆಷ್ಟು ಸುಂದರವಾದೊಡಂ ತೊಟ್ಟ ಮಾರನೆಯ ದಿನಕದು ಹಳತು ನೆಟ್ಟ ಸಸಿಯದು, ಸವಿಯ ಫಲವದು ಸೃಷ್ಟಿಯೊಳನುದಿನವು ಹೊಸತು ಕಷ್ಟ ಕೃಷಿಯೆನುತಾರಿಗೋ ಬಿಟ್ಟ ಬಾಳೆಲ್ಲ ಹಳತು – ವಿಜ್ಞಾನೇಶ್ವರಾ *****...

ಬದುಕು ಬಲು ಭಾರ ಹಾದಿಯೂ ಅತಿ ದೂರ ಮುಗಿಯದ ಪಯಣ ಎಲ್ಲಿಂದ ಎತ್ತಣ. ಸಾಗುತಿದೆ ಬದುಕು ಭಯ ಆತಂಕಗಳ ಸಂಕೋಲೆ ಉದಯಿಸುವ ಸೂರ್ಯನೊಂದಿಗೆ ನೂರಾರು ಚಿಂತೆ ಬೇಗೆ ಪರಿಭ್ರಮಿಸುತ್ತಿದೆ ಮನ ಗರ ಗರ ಸುತ್ತುವ ಹದ್ದಿನಂತೆ ಕ್ಷಣ ಚಿತ್ತ ಕ್ಷಣ ಪಿತ್ತ. ಭೀತಿ ಭೀ...

ಹೊಲೆಯ! ಹೊಡೆಯಬೇಡೆಲೋ ಹಳ್ಳಿ ಎತ್ತನು! ಕ್ರೂರಿ! ಕನಿಕರಿಲ್ಲವೋ ಕೊಲ್ಲೊ ಕುತ್ತನು! ೧ ದುಡಿದು ದೇಹವೆಲ್ಲವೂ ಕೊರಗಿ ಕುಂದಿದೆ! ಸುಟ್ಟ ಸುಣ್ಣದಂತೆಯೇ ಸತ್ವಗುಂದಿದೆ! ೨ ಎಲವೊ ನಿನಗಾಗಿಯೇ ರಕುತ ಸುಟ್ಟಿದೆ! ತಿಂದ ನಿನ್ನ ಹೊಟ್ಟೆಯೇ ಉಬ್ಬಿ ಬಿಟ್ಟಿದ...

ಈ ಸಂಜೆಯ ಕೌನೆರಳು, ಬಾಗಿಲ ಬಳಿ ಅವನ ಕಾಲ ಸಪ್ಪಳ, ದೇವರ ಮುಂದಿನ ನೀಲಾಂಜನದಲಿ ಬೆಳಕು ಮಂದವಾಗಿ ಹಾಸಿ, ಯಾರು ಶುರುವಿಟ್ಟುಕೊಂಡಿದ್ದಾರೆ ಭಜನೆಯ ಧ್ಯಾನ, ಮಳೆ ಇಲ್ಲದೇ ಬಿರಿದ ನೆಲದ ಮಣ್ಣಿನ ವಾಸನೆ ಹರಡಿ, ಅಂವ ಬಂದ ಹೊತ್ತು, ಅವಳ ಕಣ್ಣುಗಳಲಿ ನೀರ ...

ನಾದ ವೇದಗಳ ಶಿವೆ ಭರತ ಮಾತೆಯ ಓಂಕಾರಗೀತೆಯ ಶಿರೋಮಣಿಗಳ ಮಾಲೆಯೆ ನಿನಗೆ ವಂದನೆ ನಿನಗೆ ವಂದನೆ ಶಿವೆ ||ನಾ|| ಆನಂದಾನುರಾಗದ ಪದ್ಮ ಮುಕುಟ ಶೋಭೆಯೆ ಸುರನರ ಸೇವಿತೆ ಸುಂದರಿ ಮಾಧವಿ ಲಾವಣ್ಯಕಲಾವಲ್ಲಭೆ ನಿನಗೆ ವಂದನೆ ಶಿವೆ ||ನಾ|| ಸಂಗೀತ ಸಾಹಿತ್ಯ ಪ...

ನಾ ಎತ್ತೆತ್ತ ನೋಡಲಿ ನೀ ಜಗನ್ಮಾತೆ ನಿನ್ನ ಮಾಯೆಯೆ ಈ ಜಗತ ವ್ಯಾಪಿಸಿದೆ ನಿನ್ನ ಮರೆತು ನಿನ್ನ ಮಾಯೆಯಲ್ಲಿ ನಾ ಮುಳಗಿ ಮತ್ತೆ ಮಾಯೆಯೇ ಮೋಹಿಸಿದೆ ಜನನ ಮರಣಗಳ ಸುತ್ತುವರಿಯುತ್ತ ಕಷ್ಟ ಸುಖಗಳಿಗೆಲ್ಲ ಕೈ ಚಾಚುತ್ತ ಬಾಳಿರುವೆ ಈ ನರಕ ಸದೃಶ್ಯ ಬಾಳಿನಲ...

ಚಂದ್ರಶೈಲದುನ್ನತಿಯ ರಾಜವೀಥಿಯಲಿ ಅಬ್ಬ ಬಂಡೆ ಆದಿ ಶಂಕರನ ಚಿಕ್ಕ ಗುಡಿಯೊಂದ ಕಟ್ಟಿದಂತೆ ಕಂಡೆ- ಹೊತ್ತು ಮುಗಿದ ಮುಮ್ಮೂಕ ತುದಿಗೆ ಆನಂತ್ಯದಿದಿರುಕಡೆಗೆ ಇಹದಭಂಡ ಕಥೆ ಮುಗಿಸಿದಂತೆ ಪಾಳಿನಲಿ ಒಂಟಿನಡಿಗೆ ನಿರಾಕಾರ ಏಕಾಂತ ತಂತು ಸುತ್ತುತ್ತಲಿತ್ತು ...

ನಾದನಾಮಕ್ರಿಯಾ ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ! ೧ ಸಂಪಗೆಯ ಮಲ್ಲಿಗೆಯ ಸೊಂಪು ಸೇವಂತಿಗೆಯ ಕಂಪೊಗೆವ ಜಾಜಿಯನು ಕೊಳ್ಳಿರಮ್ಮಾ! ಕೆಂಪು-ಬಿಳಿ ತಾವರೆಯ ಸುರಯಿ ಸುರಹೊನ್ನೆಗಳ ಪೆಂಪುವಡೆದರಳುಗಳ ಕೊಳ್ಳಿರಮ್ಮಾ! ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ! ...

ಸುಂದರ ಶ್ರೀಮಂತ ಶಿಲ್ಪಕಲೆ ಬಲೆಯೊಳು ನಿಂತ ಶ್ರೀ ಚನ್ನಕೇಶವಾ….| ನಿತ್ಯ ನೂತನ ನಿತ್ಯ ಚೇತನ ನಿತ್ಯ ವೈಭವವೀ ದೈವಸನ್ನಿದಾನ| ಗಂಟೆ ಜಾಗಟೆಗಳಿಲ್ಲದ ಅಪರೂಪದ ದೇವಸ್ಥಾನ|| ಕಲೆಯೋ ಇದು ಕವಿಯ ಕಲ್ಪನೆಯೋ ಇದು ಕಲ್ಲಲರಳಿದ ತರತರದ ಹೂಮಾಲೆಯೋ| ಯು...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...