ಕುಡಿಯಬೇಕು ನೀರು
ಏಳು ಕೆರೆಯ ನೀರು
ಕುಡಿಯದಿರಲು ನೀರು
ಬದುಕಲ್ಲವೆ ಬೋರು? //ಪ//

ಕಣ್ಣು ಬಿಟ್ಟ ಮೇಲೆ
ಅಲ್ಲಿ ಏಳು ಬಣ್ಣ
ಅದಕೆ ಕುರುಡು ಯಾಕೆ?
ನೀನೆ ಹೇಳು ಅಣ್ಣ

ಉಸಿರು ಆಡುವಾಗ
ಏರಿಳಿತ ಸಹಜ
ಅದೂ ಬೇಡವೇನು?
ಹೇಳು ನೀನು ಮನುಜ

ನಾಲಿಗೆ ಇದ್ದಾಗ
ರುಚಿಗಳು ಬೇಡೇನು?
ಸಿಹಿ ಮಾತ್ರ ಬೇಕು
ಕಹಿಯ ತಪ್ಪು ಏನು?

ಇರಲು ಎಲ್ಲ ಇಲ್ಲಿ
ಇರುವ ಎದೆಯ ಒಡ್ಡು
ನಾಳೆಯ ಕತೆ ಬೇಡ
ಆಗ ಎಲ್ಲ ನೋಡು
*****