ಉದಯ ರವಿಯ ಕಿರಣವೊಂದು ಹಾಡುತಿಹುದು ಹೊಸದೊಂದು ರಾಗ ರಾಗ – ರಾಗ – ರಾಗ || ಧರೆಯ ಮಡಿಲ ಹಸಿರ ಚಿಗುರು ತೋರುತಿಹುದು ಹೊಸದೊಂದು ವೇಗ ವೇಗ – ವೇಗ || ಭರತ ಮಾತೆ ಮಡಿಲ ಕುಸುಮ ನಲಿಯುತಿರಲು ಆನಂದದ ಅನುರಾಗ – ರಾಗ- ರಾಗ-...

ಭಗವನ ಒಂದೊಂದು ದಿನವೂ ಹೀಗೆ ವ್ಯರ್ಥವಾಗಿ ಹೋಗುತ್ತಿದೆ ತನ್ನ ತಾನಾಗೆ ನಿನ್ನ ಕಾಣುವ ಭಾಗ್ಯ ಯಾವ ಕ್ಷಣ ಅದೊ ನೀನಿರದ ಇಲ್ಲಿ ಮತ್ತೇನು ಇಹುದೊ ಬಾಲ್ಯದ ದಿನಗಳಲಿ ಆಟದಲ್ಲಿ ಕಳೆದೆ ತಾರುಣ್ಯದಲ್ಲಿ ಕಾಮನ ಮೋಹಿಸಿದೆ ಸಂಸಾರ ಸಾರದಲ್ಲಿ ನಿನ್ನೊಲುವ ಮರೆ...

ಬ್ರಹ್ಮಾಂಡಕೆ ಕಾನ್ ಕೊಡುತಿದ್ದೆ, ಒಬ್ಬೊಂಟಿಗ ಶಮ-ಶಿಖರದಲೂ ಮುತ್ತಿತ್ತೋ ಗುಜುಗುಜು ನಾದಾ ಝಗಝಗಿಸುವ ನಿದ್ದೆಯೊಳದ್ದಿ, ಮಾನಸವನು ಸುತ್ತಿದೆ ಎತ್ತೂ ಮರ್ಮರಿಸುವ ನಿರ್ಭರ ಮೌನಾ. ಚಿರಶುಭ್ರ ಜ್ವಾಲಾ ಗೂಢಾ, ಮನನಕ್ಕೆ ಪ್ರಾಪ್ತ ಪದಾರ್ಥಾ ಜಿನುಗುಡುತ...

ಬಾಡದಿರುವಲರಂತ ಬಗೆಯನ್ನು ಮಾಡಿದರೆ ಬೈಯುವೆನೆ ನಿನ್ನ ತಾಯೇ ? ಹಾಡುತಿಹ ಕೊಳಲಂತ ಕೊರಳನ್ನು ಮಾಡಿದರೆ ಕುಂದಿಡುವನೇನು ತಾಯೇ ? ಮೂಡುವಾ ನೇಸರಿನ ತರ ಮೆಯ್ಯ ಮಾಡಿದರೆ ಮುಚ್ಚರಿಪರಾರು ತಾಯೇ, ಕೋಡುಗಲ್ಲಂತೆನ್ನ ಮನವ ನೆಲೆನಿಲಿಸಿದರೆ ಮುನಿವೆನೇ ಲೋಕಮ...

ಸೇವೆ ಮಾಡುವರು ಬೇಕಾಗಿದೆ ಕನ್ನಡದ ಸೇವೆ ಮಾಡುವವರು ಬೇಕಾಗಿದೆ|| ಸೇನೆ ಕಟ್ಟುವವರು ಬೇಕಾಗಿದೆ ಕನ್ನಡ ಸೇನೆ ಕಟ್ಟುವವರು ಬೇಕಾಗಿದೆ|| ಗಡಿಯ ಒಳಗೆ, ಗಡಿಯ ಹೊರಗೆ ಕನ್ನಡದ ಪಡೆಯ ಕಟ್ಟುವವರು ಹುಟ್ಟಬೇಕಾಗಿದೆ| ಗಲ್ಲಿ ಗಲ್ಲಿಯಲ್ಲಿ ಕನ್ನಡದ ಬಾವುಟ ಹ...

ಹೇಗೆ ಹೇಳಲಿ ನಿಮಗೆ ನನ್ನೊಳಗಿನ ಪಂಜಾಬು ಸ್ವರ್‍ಣ ದೇಗುಲದಲ್ಲಿ ಕರ್‍ಣ ಕಿವುಡು ಹೇಗೆ ಹೇಳಲಿ ನಿಮಗೆ ನನ್ನೊಳಗಿನ ಕಾಶ್ಮೀರ ಸೇಬು ತೋಟದ ತುಂಬ ಚೀರು ಚೂರು. ಹಾಳು ಬಾವಿಯ ಬದುಕ ಹೇಗೆ ಹೇಳಲಿ ನಿಮಗೆ ಬಿರುದ-ಬಾವಲಿ ಎಲ್ಲ ಹೂಳು ಚಿತ್ತ ಎಷ್ಟು ಕೊರೆದರ...

ಮುಸ್ಸ೦ಜೆಯ ಹೊತ್ತಿನಲಿ ಗೂಡು ಸೇರುವ ತವಕದಲಿ ಗುಂಪಾಗಿ ಹಾರುವ ಹಕ್ಕಿಗಳು, ಮಧ್ಯಾಹ್ನ ನೆರಳಾಗಿದ್ದ ಮರಗಳ ಬರಬರುತ್ತ ಕಡುಕಪ್ಪು ನೆರಳು ಗಡುಸಾಗಿ ನಿಶ್ಚಲವಾಗಿ ನೆಲ ಮುಗಿಲು ಒಂದಾಗಿ ಕ್ಷಿತಿಜದಲಿ ಸಂಧಿಸುವ ರೇಖೆಯಲಿ ಒಂದಾದ ಆಕಾಶ ಭೂಮಿಗಳ ಸುಂದರ ಸ...

ಬೋಧಿವೃಕ್ಷದ ಕೆಳಗೆ ಕುಳಿತ ಬೋಧಿಸತ್ವ ಕೇಳುತಾನೆ ತತ್ವಪದಗಳ ಹಾಡುತಾಳೆ ಹರಿಣಿ ಅತಿಶ್ರುತಿ ಮಾಡದಿರು ವಾದ್ಯದ ತಂತಿಗಳ ಅತಿಶ್ರುತಿ ಮಾಡಿದರವು ತುಂಡರಿಸಿ ಬೀಳುವುವು ಆಮೇಲವು ನುಡಿಯವೇನೂ ಓ ಬೋಧಿಸತ್ವ ಸಡಿಲಾಗಿಸದಿರು ವಾದ್ಯದ ತಂತಿಗಳ ಸಡಿಲಾಗಿಸಿದರ...

ಮಾತನಾಡಬೇಕು ನಾವು ಒಂದು ಘಳಿಗೆ ಕುಳಿತು ಬಿಟ್ಟು ಎಲ್ಲ ಹಮ್ಮು ಬಿಮ್ಮು ಹೃದಯ ಬೆಸೆಯಬೇಕು ದಾರ ಏಕೆ ದೂರ ಬೇಕೆ ಮಾತನಾಡುವಾಗ ಬೇಲಿ ಬೇಡ ನೋಟ ಇರಲಿ ಮನಸು ಕೂಡುವಾಗ ಹಂಚಿಕೊಂಡ ರಕ್ತವೊಂದೆ ರಕ್ತ ಹರಿವುದೇಕೆ? ಹಾಲೂಡಿದ ನೆಲವದೊಂದೆ ಇಲ್ಲಿ ಕದನವೇಕೆ?...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...