ಹೃದಯದಾಕಾಶವಿದು ಅದುರಿ ಗಡ ಗದ್ದರಿಸಿ ಪ್ರೇಮವಂಕುರಿಸಿ ಸೌರಭವು ಹಾರಿ ಭೇದಿಸುತ ಸಪ್ತತಲ ಇಂದ್ರಚಂದ್ರರ ಲೋಕ ಪಾರ ಅಪರಂಪಾರ ದೂರ ಸೇರಿ ಆವ ಲೋಕವ ಕಾಣೆ-ದಿವ್ಯಜ್ಯೋತಿಯ ಕಂಡೆ ಕಣ್ಣರಳಿ ಬಂತಾಗ ಭವ್ಯದೃಷ್ಟಿ ಆವ ಆಶೆಯ ಪಾಶವೆಸಗಿಲ್ಲ ಬಿರುಗಾಳಿ ಬೀಸಿ ...

ನೆಲದ ರಸವನ ಹಿಂಡಿ ನೇಗಿಲಿನ ಮೊನೆಯಿಂದ ಅನ್ನಮಂ ಪಡಯುವರು ಮಣ್ಣಿನಿಂದ- ಜೋಡೆತ್ತುಗಳ ಕಟ್ಟಿ ಜೀವದೆಳೆಗಳ ತಂದು ಲೋಕಮಂ ಸಲಹುವುದು ಮೋದದಿಂದ- ಕೆರೆದೆಳೆದು ಸಾರಮಂ ಸಾಲಿನಲಿ ನಿಲಿಸುವುದು ಹಸನೆಸಗಿ ಸವಿಯೂಡಿ ಸುಲಭದಿಂದ- ತೆರೆದು ಬೇರಿಗೆ ದಾರಿ ಬೆಳೆ...

ಗಟ್ಟಿಯಾಗದೇ ಬದುಕು ದಕ್ಕದುನ್ನು ಕೆರೆ ಬಾವಿಗಳ ಪಾಲು ಆಗದಿರು ಹಗ್ಗದ ಉರುಳಿಗೆ ನಿನ್ನ ಕೊರಳ ನೀಡದೇ ಸುತ್ತಲೂ ಕಟ್ಟಿದ ಉಕ್ಕಿನ ಗೋಡೆ ಬೆಂಕಿಯ ಜ್ವಾಲೆಗೆ ದೂಡುವ ಕೈಗಳನ್ನು ಕತ್ತರಿಸಲು ಝಳಪಿಸುವ ಖಡ್ಗವಾಗು. ಶತ್ರುಗಳ ಸೆಣಸಿ ನಿಲ್ಲಲು ಆತ್ಮವಿಶ್ವ...

ಇಲ್ಲವೆಂದರೂ ಇಲ್ಲವಾಗುವುದೇ? ನೆನಪು- ಹುಲ್ಲು ಗರಿಕೆಯಂತೆ ಹಸಿರಾಗಿದೆ. ಆ ಚಿತ್ರ ಅವನದೇ ಮಳೆಬಿಲ್ಲಿನಂತೆ ಭರತ ಖಂಡದ ಮೇಲೆ ಬಾಗಿದೆ ತಂಗಾಳಿ ಅದನು ತೂಗಿದೆ. ಕಣೋಳಗಿನ ಮಿಂಚು ಭೂಮಂಡಲವ ಬೆಳಗಿದೆ ನಿಸ್ವಾರ್ಥ ನಗೆ ಮೂಲೆ ಮೂಲೆಯನೂ ತಾಕಿದೆ ಸರಕು ಸಂ...

ಹಗುರವಾಗಿ ತೇಲಿ ಬರುವುದು ನೀರು ಹನಿ ಹನಿ ಮುಗಿಲ ಮಳೆಯಾಗಿ ನಾವು ನಿಂತ ಕಡೆಗೆ ಉತ್ಸವ ಮೂರ್‍ತಿಯಂತೆ ನಾವಾಗಿ ಹೋಗಿ ದಣಿದು ಮಣಿದು ನಮಿಸಿ ಬರಬೇಕು ಕಣ್ಣಿಗೆ ನಿಲುಕದ ಅಗಾಧ ಕಡಲಿಗೆ ಗರ್‍ಭಗುಡಿಯ ವಿಗ್ರಹದಂತೆ *****...

ಶತ್ರುವು ಕಾಣುತ್ತಿಲ್ಲ ನಮಗೆ ಶತ್ರುವು ಕಾಣುತ್ತಿಲ್ಲ ಅಡಗಿರಬಹುದು ಒಳಗೆ; ಅವನು ಕಾಣುತ್ತಿಲ್ಲ ಹೊರಗೆ ||ಪ|| ಸುಳಿವು ಸಿಕ್ಕರೂ ಅವನ ಹಿಡಿವುದು ಬೇಕಿಲ್ಲ ಹಿಡಿಯದೆ ಯುದ್ಧವು ಎಲ್ಲಿ? ನಮ್ಮ ದಾರಿಗೆ ಭವಿಷ್ಯ ಎಲ್ಲಿ? //ಅ.ಪ.// ಅಕ್ಕಪಕ್ಕದವರು ಇಲ...

ನಾಲ್ಕು ಜನರಿರುವ ಜಾಗವನ್ನು ದಾಟಿ ಹೋಗ ಬೇಕೆಂದರೆ ಕುತ್ತಿಗೆಗೆ ಬರುವುದು ಜನರ ನೋಟ ಹೊಟ್ಟೆಯೊಳಗೆ ಕಟ್ಟು ಚೂರಿಯನ್ನಾಡಿಸಿದಂತಾಗುವುದು ಮಾತುಗಳು ನಗಾರಿಯ ಭೇರಿಯಂತೆ ತಮಟೆ ಹರಿಯುವವು ತಲೆ, ತಂತಾನೆ ಮಣ ಭಾರ ವಾಗುವುದು; ಮೇಲೆತ್ತದಂತಾಗುವುದು ನಿತ್...

ಮುಖವ ಕನ್ನಡಿಯಲ್ಲಿ ನೋಡುವಿರಿ ನೋಡಿ ಬಗೆಬಗೆಯಲ್ಲಿ ತೀಡುವಿರಿ ಮನವ ಯಾವುದರಲ್ಲಿ ನೋಡುವಿರಿ ಮನದ ಡೊಂಕನು ಎಂತು ತಿದ್ದುವಿರಿ ಅಂತರಾತ್ಮದ ಬೆಳಕಿಲ್ಲದೆ ನದಿಯಲಿಳಿದು ಮೈಯ ತೊಳೆಯುವಿರಿ ಕೆಸರು ಕೊಳೆಯನ್ನು ಅಲ್ಲಿ ಕಳೆಯುವಿರಿ ಮನವ ಯಾವುದರಲ್ಲಿ ತೊಳ...

ಹಗಲಿನ್ಯಾಗ ಮಾತ್ರ ಇವು ಅರಳ್ತಾವು ಸೂರ್ಯೋದಯದ ನಂತರ ಕೆಲವು ಅರಳ್ತಾವು ಸೂರ್ಯನ ಕಿರಣ ಮೈ ಮ್ಯಾಗ ಬಿದ್ದ ಕೂಡ್ಲೆ ಕೆಲವು ಪಕಳಿ ಬಿಚ್ಚತಾವು ಇನ್ನು ಕೆಲವು ಸಂಜೆಯಿಂದ ಶುರುವಾಗಿ ನಡುರಾತ್ರಿ ಪೂರ್ಣ ಅರಳ್ತಾವು ಅಂದ್ರ ನಮಗ ಆಶ್ಚರ್ಯ ಆಗ್ತೈತಿ ಹಸಿರು...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...