(ಕೆರ್‌ಯಾ ಯೇರಿಯ ಮೇನೇ) ಕೆರ್‌ಯಾ ಯೇರಿಯ ಮೇನೇ ಕೆರ್‌ಯಾಯೇರಿಯ ಮೇನೇ ಜಡ್ಯಾ ಕೊಂಬಿನ ಬಸವ ಹಾದಾಡಿ ಮೆಂದಾ ಹೊಡಿ ಹುಲ್ಲಾ || ೧ || ಹಾದಾಡಿ ಮೆಂದಾ ಹೊಡಿ ಹುಲ್ಲು ಬಸುವಪ್ಪ ಕಡುಜೀಲ ಬನುಕೇ ನಡದೀದ || ೨ || ಕಡುಜೀಲ ಬನುದಲ್ಲಿ ಕಡುಜಾಣರ ಕಾವೀಲ ಅಂ...

ಆನೆ ದಂತದವೊಲಾಯ್ತಲಾ ಕೃಷಿ ಭೂಮಿ ಯನು ನಿವೇಶನಕೆಂದು ಮಾರಿದೊಡುಂಟು ಘನ ಬೆಲೆಯದನು ಉತ್ತು ಬಿತ್ತಿದೊಡೆ ಆನೆ ಸಾಕಿದಂದದಲಿ ಬರಿ ಖರ್ಚು ಮಾನಿಸೆಲೋ ಕಾನನವನತಿ ತುರ್‍ತಿನಲಿ – ವಿಜ್ಞಾನೇಶ್ವರಾ *****...

ಲತೆಯಾಗದಿರು ಹೂವಾಗದಿರು ವನಿತೆ ಮರವಾಗು ಹೆಮ್ಮರವಾಗು ಮೋಡವಾಗದಿರು ವನಿತೆ, ಗುಡುಗಾಗು ಸಿಡಿಲಾಗು, ಮಿಂಚಾಗು. ಹಣತೆಯಾಗದಿರು ಮೊಂಬತ್ತಿಯಾಗದಿರು ವನಿತೆ, ಕಿಡಿಯಾಗು ಜ್ವಾಲಾಮುಖಿಯಾಗು ಚಾಕುವಾಗದಿರು ಈಳಿಗೆ ಮಣೆಯಾಗದಿರು ವನಿತೆ ಕತ್ತಿಯಾಗು ಗುರಾಣ...

ಈ ಹುಡಿಯ ಗೂಡಿನೊಳಗೆ ರಕ್ತ ಮಾಂಸ ಹೂವ ಮಿಡಿಯು ಕಾಲ ಕಾಲಕೆ ನೆರದು, ಅರಳಿ ಮಿಂದ ಘಮ ಮನದ ಘನ ಎಲ್ಲಾ ಮುಖದಲಿ ಗುಹೇಶ್ವರನ ನೆರಳು. ಮನಸಿನಲಿ ಮಹಾಲಿಂಗದ ಬೆಳಕು ಅರಳಿತು ಆಳಕ್ಕಿದರೆ ಕ್ಯಾದಿಗೆಯ ಘಮ ಸೊಂಪನ್ನು ಕಂಡವರಿಲ್ಲ ಅನುಭವಿಸಿದವರು ಚಿಹ್ನೆಯಲಿ...

ಶರಣೆಂಬೆವು ತಾಯಿ ಶರಣೆಂಬೆವು ಶರಣಾಗತರಾಗಿಹೆವು ರಕ್ಷಿಸೆಮ್ಮನು ಕರಮುಗಿದು ಬೇಡುವೆವು ವರವೊಂದನು || ಭುವನೇಶ್ವರಿಯೆ ತಾಯೆ ರಾಜ ರಾಜೇಶ್ವರಿಯೆ ಕರುನಾಡ ತಾಯೆ ಕರುಣೆಯ ತೋರು ಕರಮುಗಿದು ಬೇಡುವೆವು ವರವೊಂದನು || ನಿನ್ನ ಕರುಣೆಯೆ ನಮಗೆ ಶ್ರೀ ರಕ್ಷೆ...

ಮನುಜ ಬದುಕಿನ ಬವಣೆಯಲಿ ಬೆಂದು ಹೋಗಬೇಡ ಪತಂಗ ಬೆಳಕಿಗಾಗಿ ಜಲಿಸಿದಂತೆ ಕಂದು ಹೋಗಬೇಡ ರಜನಿಗಳಲಿ ಚಂದ್ರ ಬಾರದಿದ್ದರೆ ಆಮಾವಾಸ್ಯೆ ದೇಹದಲ್ಲಿ ಆತ್ಮನಿದ್ದರೂ ಮರೆತಿದ್ದರೆ ಸಮಸ್ಯೆ ನಿನ್ನ ಆಯುಷ್ಯದ ಎಳೆ ಎಳೆ ಜಾರುತ್ತಿದೆ ಪ್ರಪಾತಕ್ಕೆ ಅರಿಯದೆ ಮೋಜಿ...

೧ ಶಿವನುಂಡ ನಂಜು ತಿಳಿಗೊಂಡು ಮಂಜು- ಮಂಜಾಗಿದೆ ಈ ಸಂಜಿಗೆ. ಇದು ಉಷಾಮಿಷದ ಪೊಸನೇಹ ಸೇರಿ ಕಳೆ ಏರಿದೆ ಹುರಿಮಂಜಿಗೆ. ಭೌಮಾತ್ಮಭೂತಿ ಚೈತನ್ಯದೂತಿ, ಊ- ರ್ಜಿತದಾ ಸಿರಿವಂತಿಗೆ. ಕಥಕ್ಕಳಿಯ ಪುತ್ಥಳಿಯೆ ! ಪೃಥಕ್ ಥತ್ ತಳಿಸಿದೆ ಜೀವಂತಿಗೆ. ಜಡೆತುಂಬ ...

ಪ್ರಜಾರಾಜ್ಯ ಬಂತು ಬಂತು, ಸಕಲಪ್ರಜಾರಾಜ್ಯ ! ಪ್ರಜೆಗಳಿಗೇ ಇಲ್ಲಗೊತ್ತು: ‘ಯಾರದು ಈ ರಾಜ್ಯ!’ ೧ ಆಯ್ಕೆಯ ದಿನ ಬಂದಾಕ್ಷಣ ಸವಿಯ ಭಕ್ಷ್ಯ-ಭೋಜ್ಯ ಪ್ರಜರ ಬಾಯ್ಗೆ ಬೀಳ್ವುದು ನಿಜ, ಅದಕೆ ಪ್ರಜಾರಾಜ್ಯ ! ಆಯ್ಕೆ ಮುಗಿದ ಮರುದಿನವೇ ಪ್ರಜೆಗಳೆಲ್ಲ ತ್ಯಾ...

ಅಮ್ಮ ನಿನ್ನ ನಾನು ಸರಿಯಾಗಿ ನೋಡಿಕೊಂಡೆನೆ?|| ಹಿರಿಯ ಅಣ್ಣ ನಿನಗೆ ನೆಚ್ಚಿನವನೆಂದು ಕಿರಿಯ ತಮ್ಮ ನಿನಗೆ ಮೆಚ್ಚಿನವನೆಂದು ನನಗೆ ನಾನೇ ಅಂದುಕೊಂಡು| ಅವರೇ ನಿನ್ನ ನೋಡಿಕೊಳ್ಳಲೆಂದು ಮಧ್ಯಮನಾದ ನಾನು ಹೊಣೆಗೇಡಿಯಾದೆನೆ?|| ಅಮ್ಮಾ ನೀನು ನನ್ನ ಬಾಲ್...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...