ಏನಿದೇನಿದಕಟಾ ನಾವಿರ್ಪಲ್ಲೆ ಇರುತಿದ್ದೆಮ್ಮ ಬೇಕುಗಳೆಲ್ಲ
ವನು ಕೊಂದಾಯ್ತು ನೀರನ್ನಗಳನು ತಿಂದಾಯ್ತು
ಇನ್ನುಳಿದಿಹುದೊಂದೆ ಗಾಳಿಯದರಂತರುಷ್ಣತೆ
ಯನೇರಿಸಿರಲದಕು ಅಭಾವ ಬಂದಾಯ್ತು
ಇನ್ನೇನಿದ್ದೊಡಂ ಇರುನೆಲೆಯ ಕೃಷಿಯೊಂದ ಬದುಕಿಗಾಧಾರ – ವಿಜ್ಞಾನೇಶ್ವರಾ
*****