ಕಡಲಬಸಿರು ನೋಡುವ ಆಸೆಕಣ್ಗಳು- ತನ್ನವೇ ಐದಾರು ಬಸಿರು ನೆಲಕ್ಕುರುಳಿ ಬೆಳೆದು ನೀರಿಗಿಳಿದು ಜಾಲರಿ ತುಂಬಿ ತುಂಬಿ ಮೀನುಗಳ ತರುವ ಮಕ್ಕಳ ನೋಡಿ ನಕ್ಕಾಕೆ… ಬೆಂಕಿಯ ನಾಲಿಗೆಗೆ ಸಿಕ್ಕು ಸುಟ್ಟ ಮೀನುಗಳಿಗೆ ಅತ್ತಾಕೆ…. ಕತ್ತಲಕಾಯಕಕೆ ಬೆ...

ಸುಮ್ಮನೆ ನಿಂತಿದ್ದ ನೆನಪಿಗೆ ಚಲನೆ ಕರುಣಿಸಿದ ಅವಳ ನಗೆಗೆ ನಾಲ್ಕು ತದುಕುವ ಸಲುವಾಗಿ ಮುಖ ಸಿಂಡರಿಸಿಕೊಂಡ ನನಗೆ ನನ್ನದೇ ಮುಖಭಂಗದ ಮುಖ ನೋಡುವ ಸದಾವಕಾಶ ಒಲಿಯಿತು *****...

“ಕಂದ, ಕೇಳುತ್ತಮದ ರಾಜ್ಯ ಒಂದಿಹುದು: ಮಂದಿ ಎಲ್ಲವು ಸುಖದಿ ಬಾಳುತ್ತಲಿಹುದು;” ಎಂದು ನೀನಾಡುವಾ ರಾಜ್ಯವೆಲ್ಲಿಹುದು? ಕಂದನಲಿ ಕರುಣಿಸುತ ಇಂದು ತಿಳಿಸಮ್ಮಾ! “ಕಿತ್ತಳೆಯ ಮರಗಳಲಿ ಹೂಗಳರಳುತ್ತ ಎತ್ತಲೂ ಮಿಂಚುಹುಳು ಚಿಮ್ಮಿ ಕ...

ಅಂತು ಪೇಳುವೊಡೆಲ್ಲ ಪೇಟೆಗೆ ಬಂದು ಕುಂತೋದಿದನುಭವಕೆ ಮನ್ನಣೆ ತಂದು ಒಂದುದ್ಯೋಗ ಭಿಕ್ಷೆಯ ಪಡೆದವರಿಂದು ಸಂಭ್ರಮಿಸುತಿಹುದನು ಕಂಡ ರೈತನಿನ್ನೆಂತು ಭಂಗ ಪಟ್ಟುಂಬನ್ನದೊಳು ಸುಖವ ಕಾಂಬುದೋ? – ವಿಜ್ಞಾನೇಶ್ವರಾ *****...

ಬ್ರಹ್ಮಮಾನಸ ಸರೋವರದಲಿ ನಾವು ತೇಲುವ ಚಲುವರು ವಿಮಲ ಮಾನಸ ಕಮಲ ವನದಲಿ ನಾವು ನವಯುಗ ರಾಜರು ಉಸಿರು ಉಸಿರಲಿ ಶಿವನ ಹೆಸರನು ಬರೆದ ಶಿವಾಚಾರ್ಯರು ಲಕುಮಿ ನಾರಾಯಣರು ನಾವೇ ದೇವ ಯುಗದಾ ಪೂಜ್ಯರು ನಾವು ಜ್ಯೋತಿರ್‍ಬಿಂದು ರಥಿಕರು ಜ್ಯೋತಿ ಸಾಗರ ಪಥಿಕರು...

ಹರಿದ ಸೀರೆಯಲಿ ನೂರೆಂಟು ತೇಪೆಯ ಚಿತ್ತಾರ ಅರಿಶಿನದ ಓಕುಳಿ ಕೆನ್ನೆಗೆ ಹಣೆಯಲಿ ಕಾಸಿನಗಲದ ಕುಂಕುಮದ ಸಿಂಗಾರ ಮುಡಿಯಲ್ಲಿ ಮಾಸದ ಹೂವಿನ ದಂಡೆ ಮುಗ್ಧ ಮಗುವಿನ ಮೊಗ ಅಲ್ಲಿ ನಗುವೆಂಬ ನಗ ಕಂಗಳಲ್ಲಿ ಬತ್ತದ ವಾತ್ಸಲ್ಯದ ಒರತೆ ಆಧುನಿಕ ಗಂಧಗಾಳಿಯ ಕೊರತೆ...

ಬಿಟ್ಟು ಬಿಡದೇ ನಡೆದೆ ನಡೆದರು ದಾರಿತುಂಬ ಕಲ್ಲು ಮಣ್ಣು ಹೆಂಟೆಗಳು. ಹಟ್ಟಿಯ ಮಾಡಿನಲಿ ಗುಬ್ಬಚ್ಚಿ ಗೂಡು. ಪುಟ್ಟ ಸೇತುವೆಯ ಕೆಳಗೆ ಸಳಸಳ ಮೀನುಗಳು, ಎಲ್ಲಾ ಗಿಡಗಳ ತುಂಬ ಹಕ್ಕೀ ಹಾಡು. ಹಸಿರು ಸೊಂಪಿನ ದಾರಿತುಂಬ ಕಂಡ, ಬೇಟೆಯ ಹೆಜ್ಜೆಗಳು, ಏರು ದ...

ನೆಹರು ನಿಮ್ಮ ನೆನಪು ನಮ್ಮೆಲ್ಲರ ಅಂತರಂಗವ ತುಂಬಿ ಬರಡಾಗಿದ್ದ ನೆಲವು ಹಸಿರಾಯ್ತು ನಿಮ್ಮ ನೆನಪು ಹೊನಲ ಚುಂಬಿ || ವರುಷವು ಉರುಳಿ ಬರಲು ನಿಮ್ಮ ನೆನಪು ಭಾವನೆ ಚೆಲುವ ಕವಲೊಡೆದ ಸಸಿಯು ಚಿಗುರಿ ಮೊಗ್ಗರಳಿ ಚೆಂಗುಲಾಬಿ ಕರೆಯುವಲ್ಲಿ || ಪಂಚಶೀಲ ದಿವ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...