ಅಡವಿಯನ್ನಿ ಮರನೆ ಗಿಡವ ಬನ್ನಿ ಮರನೆ ಅಡವ್ಯಾಗೆ ಇರುವಂಥ ಸಾರಂಗ ಸರದೂಳಿ ಹೆಬ್ಬುಽಲಿ ಹುಲಿಕರಡಿ ಎಡಬಲ ಹಾಂವುತೇಳೋ ದೇವಾ| ಎನ್ನ ಮೇಲಾಡಿ ಶ್ರೀಗಂಗೀನ ತಂದಿ| ಎನ್ನ ತಪ್ಪೇನು ಕಂಡಿ ||೧|| ಪಟ್ಟಣದ ದಾರಿ ಮ್ಯಾಲ ಹಿಟ್ಟಗಳ್ಲಿನ ಮ್ಯಾಲ ಕತ್ತಿಽಯ ವರಿಯ...

ಒಲವೇ ನನ್ನೊಲವೇ ಕಣ್ಣಲ್ಲಿ ತುಂಬಿರುವೆ ಸಿಗದೆ ನೀ ತೋಳಲ್ಲಿ ತನುವ ಕೊಲ್ಲುವೆ |ಪ| ಇನ್ನು ಏಕೆ ದೂರ ದೂರ ನೋಡು ಶ್ರಾವಣ ಹೃದಯ ಈಗ ಬಿರಿಯೆ ನೀನು ಕಾರಣ |ಅ.ಪ| ಕನಸು ನೀನು ಕವನ ನೀನು ಕನವರಿಸೊ ಮನಸು ನಾನು ನಿನಗಾಗಿ ಈ ಜೀವ ನೀನಿರಲು ಈ ಬಾಳು ಜೇನು ...

ಅಮ್ಮಾ ಕ್ಷಮಿಸಿ ಅಕ್ಕಾ ಕ್ಷಮಿಸಿ ದುಡುಕಿದೆವು ಸಡಗರದಿ ದುಡುಕಿದೆವು ಸಂಭ್ರಮದಿ ಎಲ್ಲರಿಗೂ ಬರೆದ ಪತ್ರದ ಓಲೆ ಸೇರಿಬಿಟ್ಟಿತು ನಿಮಗೂ ಅದರ ಒಂದೆಲೆ. ಪರಿಹಾರವ ಕಾಣಲೆಂದೇ ಬರಲಿರುವೆವು ಮನೆಗೆ ಕಾದಿದೆ ಮನಸು ಊಟದ ತಟ್ಟೆಗೆ ಜೊತೆಯಲಿ ಸವಿಮಾತಿನ ಹಾಸ್...

ಕಚ್ಚಿ ರುಚಿ ನೋಡಿದ ಹಣ್ಣಿಗೆ ತುಟಿ ಹಚ್ಚಿದನಲ್ಲ ಆ ರಾಮ ನನಗೆ ಪ್ರಿಯನಾಗಲಿ ಒಂದಗಳು ಅನ್ನವನೆ ಉಕ್ಕಿಸಿ ಹಸಿವಿನ ಸೊಕ್ಕಡಗಿಸಿದನಲ್ಲ ಆ ಕೃಷ್ಣ ನನಗೆ ಪ್ರಿಯನಾಗಲಿ ಸತ್ತು ಒರಗಿದ ಸತಿಯ ಹೊತ್ತು ತಿರುಗಿದನಲ್ಲ ಅತ್ತು ಸೊರಗಿದನಲ್ಲ ಆ ಶಿವನು ನನಗೆ ಪ...

ಯುಗ ಯುಗಗಳು ಕಳೆದರೂ ನಾವು ಮಾಡಿದ್ದೇನು? ನಾವು ಸಾಧಿಸಿದ್ದೇನು? ಹುಟ್ಟು ಹಾಕಿದ್ದೇವೆ ಎಲ್ಲೆಂದರಲ್ಲಿ ಭಯೋತ್ಪಾದನೆಯ ಅಂಥ್ರಾಕ್ಸ್ ಮೃತ್ಯುಮಾರಿ ಜೈವಿಕ ಬಾಂಬಿನ ಅಟ್ಟಹಾಸದಲಿ ಶಸ್ತ್ರಾಸ್ತ್ರಗಳ ಪೌರುಷವೆಲ್ಲಿ? ಅಂಥ್ರಾಕ್ಸ್ ಭೀತಿ ಪಸರಿಸಿದೆ ಸೋಂಕ...

ಹುಟ್ಟಿ ಬರಲಾರಿರಾ ಇನ್ನೊಮ್ಮೆ ಪರಿಶುದ್ಧ ನೀರು ಗಾಳಿ ಬೆಳಕಿಲ್ಲದೆ ಹಬೆಯಲಿ ಕಂಗೆಟ್ಟು ಕುಳಿತ ಜನತೆಗೆ ಹೊಸಬೆಳಕಾಗಿ ಹೊಸದಾರಿ ತೋರಲು ಹುಟ್ಟಿಬರಲಾರಿರಾ ಇನ್ನೊಮ್ಮೆ? ಭೂಮಿ ಉತ್ತು ಬೀಜ ಬಿತ್ತಿ ಬೆಳೆ ಎತ್ತುತ್ತಿದ್ದವರ ‘ಕೈಗಾರೀಕರಣ ಇಲ್ಲವ...

ಕಪ್ಪು ಚೆಲುವೆಂದು ಗಣಿಸಿರಲಿಲ್ಲ ಹಿಂದಕ್ಕೆ ಗಣಿಸಿದರು ಚೆಲುವೆಂಬ ಹೆಸರು ಎಲ್ಲಿತ್ತದಕೆ ? ಏರುತಿದೆ ಈಗ ಅದು ಸೌಂದರ್ಯಪಟ್ಟಕ್ಕೆ ಸಿಕ್ಕಿಸಿದೆ ಹುಸಿ ಹೊಳೆವ ಚೆಲುವನಪವಾದಕ್ಕೆ. ಕಲೆಯ ಎರವಲು ಮುಖವ ತೊಡಿಸಿ ಕಳಪೆಗಳನ್ನು ಕಮನೀಯ ಎನ್ನಿಸುವ ಕೈವಾಡ ಎ...

ಚಿತ್ತ ಚಿತ್ತಾರದ ಭಾವಭಂಗಿಯಲಿ ಸೆಳವಿಗೆದುರಾಗಿ ಬಿಂಕಬಿನ್ನಾಣಗಳಲಿ ಸುಳಿದಾಡಿ ಮೇಲೇರಿ ಇಳಿಜಾರಕೆ ತೇಲಿಬಿದ್ದು ಒಡಲಾಳಸೇರಿ ಕ್ಷಣಾರ್ಧದಲಿ ನೆಗೆದು ತನ್ನೊಳಗೇ ಸ್ವರ್‍ಗ ಇಳಿಸಿಕೊಂಡು ಕಣ್ಮನ ಸೆಳೆವ ಅಪ್ಸರೆ ಹಂಗಿನರಮನೆಯ ಅಕ್ವೇರಿಯಂನೊಳಗೆ ಹೊರಳಾಟ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...