ಒಲವೇ ನನ್ನೊಲವೇ

ಒಲವೇ ನನ್ನೊಲವೇ
ಕಣ್ಣಲ್ಲಿ ತುಂಬಿರುವೆ
ಸಿಗದೆ ನೀ ತೋಳಲ್ಲಿ
ತನುವ ಕೊಲ್ಲುವೆ |ಪ|

ಇನ್ನು ಏಕೆ ದೂರ ದೂರ
ನೋಡು ಶ್ರಾವಣ
ಹೃದಯ ಈಗ ಬಿರಿಯೆ
ನೀನು ಕಾರಣ |ಅ.ಪ|

ಕನಸು ನೀನು ಕವನ ನೀನು
ಕನವರಿಸೊ ಮನಸು ನಾನು
ನಿನಗಾಗಿ ಈ ಜೀವ
ನೀನಿರಲು ಈ ಬಾಳು ಜೇನು
ನೀನಿರದೆ ಈ ಜಗವು
ರವಿಯಿರದ ಶಶಿಯಿರದ ಬಯಲು ಬಾನು

ಪ್ರೀತಿ ನೀನು ರೀತಿ ನೀನು
ಇನ್ನು ಭೀತಿ ಏನು?
ತುಂಬಿರುವ ಕಡಲಾಗಿ
ಮೊರೆದಿರಲು ಈ ಪ್ರೀತಿ ಜೇನು
ನಿನ್ನ ಹಾಡು ನನ್ನ ನಾಡು
ನಾ ರಾಜ ನೀ ರಾಣಿ ಅಜರಾಮರವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಮಲಾ ಮೇಡಂಗೆ
Next post ಸಾನಿಯಾ ಮಿರ್‍ಜಾ

ಸಣ್ಣ ಕತೆ

 • ನಂಬಿಕೆ

  ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

 • ಎರಡು…. ದೃಷ್ಟಿ!

  ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

 • ಮಂಜುಳ ಗಾನ

  ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

 • ರಾಮಿ

  ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

 • ತನ್ನೊಳಗಣ ಕಿಚ್ಚು

  ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…