ಜಗದ ಕಾವಲುಗಾರ ನಿದ್ರಿಸಿದ್ದಾನೆ- ಕುಂಭಕರ್ಣನಂತೆ! ಇಲ್ಲಿಗೆ ಯಾರೂ ಬರಬಹುದು ಇಲ್ಲಿಂದ ಯಾರೂ ಹೋಗಬಹುದು ಇಲ್ಲಿ ಏನೂ ನಡೆಯಬಹುದು ಕಾವಲುಗಾರ ನಿದ್ರಿಸಿದ್ದಾನೆ- ಕುಂಭಕರ್ಣನಂತೆ! ಕನ್ನ ಹಾಕಬಹುದು, ಎಲ್ಲ ದೋಚಬಹುದು ಕೊಚ್ಚಿ ಹಾಕಬಹುದು ದಂಗೆ ಎಬ್ಬಿ...

ಎಷ್ಟೊ ಸಲ ನುಡಿಸಿರುವೆ ನೀ ಪಿಯಾನೋವನ್ನ, ಏನದರ ಭಾಗ್ಯವೇ ಚಿನ್ನ! ಎರಡೂ ಬದಿಗೆ ನೀ ತೂಗಿ ಮೈಯ, ಸರಿಸಲು ಬೆರಳು ಸಾಲನ್ನ ಸಂಭ್ರಾಂತಿ ನನಗೆ ಸುರಿಯುವ ಜೇನುದನಿಮಳೆಗೆ. ಎತ್ತಿದೆಯೊ ಬೆರಳ, ಚಂಗನೆ ನೆಗೆದು ಅಂಗೈಯ ಮುತ್ತಿಡುವ ಸ್ವರದ ಕೀ ಮನೆಗಳ ಅದೃಷ...

ಸೃಷ್ಟಿ ಚೈತನ್ಯಮೂಡಿ ಕಣಕಣವೂ ಚಿಗುರೊಡೆದು ಮೈತುಂಬಾ ಬಂಗಾರ ಹುಡಿ ಅಂಕುಡೊಂಕು ಗುಡ್ಡ ಬೆಟ್ಟ ಕೊಳ್ಳಗಳ ಗೋಜಲು ಗದ್ದಲಗಳ ದಾಟಿ ಸುಳಿದಾಡಿ ನಿರುಮ್ಮಳ ಹರಿವ ಜೀವನ್ಮುಖಿ ಹೊಲಗದ್ದೆ ಹಸಿರು ಹೂಗಳ ಮೇಲೆಲ್ಲ ಇಬ್ಬನಿ ಕೋಶ ಒಡೆದು ಹೊರಬಂದ ಚಿಟ್ಟೆ ರೆಕ್...

ಅತಾಳ ಪಾತಾಳ ಸಾತಾಳ ರಸತಾಳ ಭೂತಾಳದೊಳಗೊಂದು ಶಶಿ ಹುಟ್ಟಿ ಕೋಲೇ || ೧ || ಭೂತಾಳದೊಳಗೊಂದು ಶಶಿ ಹುಟ್ಟಿ ಪಾತಾಳಕೆ ಬೇರೂ ಜಿಗಿದಾವೂ ಕೋಲೇ || ೨ || ಪಾತಾಳಕೆ ಬೇರೂ ಜಿಗಿದಾವಾ ಶಶಿಯಲ್ಲಿ ಆಕಾಶಕೆ ಸೈವಾಗಿ ನೆಗುದಾವೇ ಕೋಲೇ || ೩ || ಆಕಾಶಕೆ ಸೈವಾಗ...

ಆ ತಿಪ್ಪೆ ಗೊಬ್ಬರದ ಸತ್ಯ ತಾನಬ್ಬರದ ಮೂಟೆ ಮಿಶ್ರಣವಾಯ್ತು ಅನ್ನಾಹಾರದ ಸತ್ತ್ವವದಂತೆ ಮಾತ್ರೆ ಮದ್ದುಗಳಾಯ್ತು ಅನುಭವದ ಸತ್ತ್ವವದಂತೆ ಶಾಲೆಯೊಳಕ್ಷರವಾಯ್ತು ಆತ್ಮೀಯ ಜೀವದೇವ ಸಂಬಂಧವಾ ವಿಜ್ಞಾನ ವಶವಾಯ್ತು ಅಂತೆಲ್ಲರೊಳಿರುತಿದ್ದ ದೇಹ ಬುದ್ಧಿ ಬಲವ...

ಇಷ್ಟೊಂದು ಚಂದ್ರಮನ ಬಚ್ಚಿಡೋದೆಲ್ಲಿ ಗೆಳತಿ ಇಷ್ಟೊಂದು ಚಂದ್ರಮನ ಏನ್ಮಾಡೋಣ ಬೆಟ್ಟದಲು ಚಂದ್ರಮ ಬಟ್ಟಲಲು ಚಂದ್ರಮ ಕೊಳದೊಳು ಚಂದ್ರಮ ಬಾವಿಯೊಳು ಚಂದ್ರಮ ನೀರಲ್ಲು ಚಂದ್ರಮ ಕೊಡದಲ್ಲು ಚಂದ್ರಮ ಬಾಗಿಲಲು ಚಂದ್ರಮ ಕಿಟಕಿಯಲು ಚಂದ್ರಮ ಮಾಡಲ್ಲು ಚಂದ್ರ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...