ಜಗದ ಕಾವಲುಗಾರ
ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಇಲ್ಲಿಗೆ ಯಾರೂ ಬರಬಹುದು
ಇಲ್ಲಿಂದ ಯಾರೂ ಹೋಗಬಹುದು
ಇಲ್ಲಿ ಏನೂ ನಡೆಯಬಹುದು
ಕಾವಲುಗಾರ ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಕನ್ನ ಹಾಕಬಹುದು,
ಎಲ್ಲ ದೋಚಬಹುದು
ಕೊಚ್ಚಿ ಹಾಕಬಹುದು
ದಂಗೆ ಎಬ್ಬಿಸ ಬಹುದು
ಅತ್ಯಾಚಾರ ಮಾಡಬಹುದು
ಬಲಾತ್ಕಾರ ಮಾಡಬಹುದು
ಕಾವಲುಗಾರ ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಅವನಿಗೆ
ಕಿವಿ ಕೇಳಿಸುವುದಿಲ್ಲ.
ಕಣ್ಣು ಕಾಣಿಸುವುದಿಲ್ಲ
ಹೃದಯ ಮಿಡಿಯುವುದಿಲ್ಲ
ಇಲ್ಲೇನಾದರೂ ಯೋಚನೆಯಿಲ್ಲ
ನಿಶ್ಚಿಂತನಾಗಿ ನಿದ್ರಿಸಿದ್ದಾನೆ-
ಕುಂಭಕರ್ಣನಂತೆ!
ಜಗವ ಕಾಯುವವರಿಲ್ಲ
ಮಲಗಿರುವ ಕಾವಲುಗಾರನ
ಎಬ್ಬಿಸುವವರಿಲ್ಲ.
ಕಾವಲುಗಾರ ಎಚ್ಚರಿದ್ದರೆ ತಾನೆ
ಜೀವನದಲ್ಲಿ ಭದ್ರತೆ.
ಸುಖ, ಶಾಂತಿ, ನೆಮ್ಮದಿ?
ಕಾವಲುಗಾರ ನಿದ್ರಿಸಿದ್ದಾನೆ
ನಿಶ್ಚಿಂತೆಯಿಂದ
ಕುಂಭಕರ್ಣನಂತೆ!
*****