ಸುಗ್ಗಿ ಪದ – ಜಾಗಡಿ ಪದ

ಅತಾಳ ಪಾತಾಳ ಸಾತಾಳ ರಸತಾಳ
ಭೂತಾಳದೊಳಗೊಂದು ಶಶಿ ಹುಟ್ಟಿ ಕೋಲೇ || ೧ ||

ಭೂತಾಳದೊಳಗೊಂದು ಶಶಿ ಹುಟ್ಟಿ
ಪಾತಾಳಕೆ ಬೇರೂ ಜಿಗಿದಾವೂ ಕೋಲೇ || ೨ ||

ಪಾತಾಳಕೆ ಬೇರೂ ಜಿಗಿದಾವಾ ಶಶಿಯಲ್ಲಿ
ಆಕಾಶಕೆ ಸೈವಾಗಿ ನೆಗುದಾವೇ ಕೋಲೇ || ೩ ||

ಆಕಾಶಕೆ ಸೈವಾಗಿ ನೆಗುದೀತಾ ಶಶೀ
ವೃಕ್ಷವೆಂಬ ಹೆಸರೂ ಬಂದೀತು ಕೋಲೇ || ೪ ||

ವೃಕ್ಷವೆಂಬ ಹೆಸರೂ ಬಂದೀತಾ ಶಶೀಗೇ
ಕಾಯಿ ಹಣ್ಣಾಗಿ ಬೆಳುಗೀತು ಕೋಲೇ || ೫ ||

ಕಾಯಿ ಹಣ್ಣಾಗಿ ಬೆಳುಗಿತಾ ವೃಕ್ಷಕ್ಕೆ
ನೂರ್ವೊಂದು ಕಪಿಗಳು ಯೆರುಗಾವೆ ಕೋಲೇ || ೬ ||

ನೂರ್ವೊಂದು ಕಪಿಗಳು ಯೆರುಗಾವಾ ವೃಕ್ಷಕ್ಕೆ
ಭೂಮೀಗ್ವೊಂದು ಹೆಗಲೂ ಯೆರುಗಾವೆ ಕೋಲೇ || ೭ ||

ಭೂಮೀಗ್ವೊಂದು ಹೆಗಲೂ ಯೆರುಗಾವಾ ವೃಕ್ಷಕ್ಕೆ
ಆಚೇರಿ ತಿಮ್ಮಣ್ಣ ಕಡುತಂದಾ ಕೋಲೇ || ೮ ||

ಆಚೇರಿ ತಿಮ್ಮಣ್ಣ ಕಡುತಂದಾ ಹೆಗಲಾ
ಗುಡುಗಾರ ಬೊಮ್ಮಣ್ಣ ಪಡತಿಕೆತ್ತಿದ ಕೋಲೇ || ೯ ||

ಪಡತಿಕೆತ್ತಿ ಬೆಳಗಿಟ್ಟ ಕೋಲಿಗೆ
ಹೊನೆ ಮಾಣ ದೇವ್ರ ಮುಂದೆ ಮಡುಗಿದರು ಕೋಲೇ || ೧೦ ||

ಹೊನೆ ಮಾಣ ದೇವ್ರ ಮುಂದೆ ಮಡಗೀದಾ ಕೋಲಿಗೆ
ಗಂದಾ ಹೂವನ್ನೆ ಪೂಸಿದರು ಕೋಲೇ || ೧೧ ||

ಗಂದಾ ಹೂವನ್ನೆ ಪೂಸಿದಾ ಕೋಲಿಗೆ
ಹಣ್ಣುವೀಳ್ಯಾವಾ ಇಟ್ಟಿದರು ಕೋಲೇ || ೧೨ ||

ಹಣ್ಣುವೀಳ್ಯಾವಾ ಇಟ್ಟಿದಾ ಕೋಲಿಗೆ
ಕಾಯೊಡದಿ ಕಯ್ಯಾ ಮುಗಿದಾರೂ ಕೋಲೇ || ೧೩ ||

ಕಾಯೊಡದಿ ಕಯ್ಯಾ ಮುಗಿದಾರಾ ಕೋಲಿಗೆ
ಮಂಗಳಾರತಿಯಾ ಬೆಳಗಿದರು ಕೋಲೇ || ೧೪ ||

ಮಲವಯ್ಯನೆಂಬವ ಮಾದೊಡ್ ಶೂರ
ಮಲವಯ್ಯನೆಂಬವ ಮಾದೊಡ್ ಶೂರನು ಕೋಲೇ || ೧೫ ||

ಉಟ್ಟಾ ಮೈಲಿಗೆಯಾ ತೆಗೆಯನು ತೊಳೆಯಾನು ಮಲವಯ್ಯ
ಉಂಡಾ ಯಂಳ್ಳಕೆ ಅಂಜನು ಕೋಲೇ || ೧೬ ||

ಮಲವಯ್ಯಾ ನೆಂಬವ ಮರಕೆ ಹಬ್ಬಿದ ಬಳ್ಳೀ
ಎಂದೀಗೂ ಬಳ್ಳಿ ಹರಿಯಾವು ಕೋಲೇ || ೧೭ ||

ಇಂದೀಗಾ ಬಳ್ಳಿ ಹರಿಯಾವು ಹುಸಿಯಾವು
ಇಂದೀಗಾ ಮರನಾ ಬಿಡಲಾರೆ ಕೋಲೇ || ೧೮ ||

ಮಲವಯ್ಯ ಮಲಗೂವ ಮಂಚಾದ ಕೋಲಿಗೆ
ಜಂತಾದವೆಂಬೂ ಬೊಂಬೇಗಳು ಕೋಲೇ || ೧೯ ||

ಜಂತಾದವೆಂಬೂ ಬೊಂಬೇಗಳು ಮಂಚಕ್ಕೆ
ಇಂದಿಗಾ ಮರನಾ ಬಿಡಲಾರೆ ಕೋಲೇ || ೨೦ ||

ಕೋಲಣ್ಣ ಗಂಗೀಗೂ ಕೋಲಣ್ಣ ಗೌರಿಗೂ
ಕೋಲು ಕೋಲೇನಾ ಕೋಲೆನ್ನ ಕೋಲೇ || ೨೧ ||

ಕಾಲೂ ಬಾಲಾ ಚಂದಾ ಮೇಲೇ ಹೆಗಲೂ ಚಂದಾ
ಬಾಲದಲ್ಲೀ ಚಂದಾ ಬಸುವಯ್ಯಾ ಕೋಲೇ || ೨೨ ||

ಬಾಲದಲ್ಲಿ ಚಂದಾ ಬಸವಯ್ಯಾನಾ ಪಾದಕ್ಕೆ
ಹಣ್ಣುವೀಳ್ಯಾ ಇಟ್ಟು ಶರಣೆಂಬೆ ಕೋಲೇ || ೨೩ ||

ಹಣ್ಣುವೀಳ್ಯಾ ಇಟ್ಟು ಏನಂದಿ ಶರಣಂಬೇ
ನಾವ ಮಾಡುವಾ ಕಾರ್ಯ ಜೀಯ ಎಂದು ಕೋಲೇ || ೨೪ ||

ಕಾಲು ಬಾಲಾ ಚಂದಾ ಮೇಲೆ ಪಾವ್ಡಾ ಚಂದಾ
ಬಾಲಾದಲ್ಲಿ ಚಂದಾ ಬಸುವಯ್ಯನ ಕೋಲೇ || ೨೫ ||

ಹಾಲಗಾಯೀ ವಡೂದೂ ಬಸವಯ್ಯನ ಪಾದಕ್ಕೆ
ಹಾಲಗಾಯೀ ವಡುದೂ ಶರಣಂಬೆ ಕೋಲೇ || ೨೬ ||

ಹಾಲಗಾಯೀ ವಡುದೂ ಏನಂದಿ ಶರಣಂಬೇ?
ನಾವ ಮಾಡೂವಾ ಕಾಯಕ ಜಂಬುವೆಂದೂ ಕೋಲೇ || ೨೭ ||

ಕಾಲೂ ಬಾಲಾ ಚಂದಾ ಮೇಲೇ ಶೊಂಬೂ ಚಂದಾ
ಬಾಲಾದಲ್ಲಿ ಚಂದಾ ಬಸುವಯ್ನ ಕೋಲೇ || ೨೮ ||

ಬಾಲಾದಲ್ಲಿ ಚಂದಾ ಬಸುವಯ್ನ ಪಾದಕ್ಕೆ
ಮಂಗಲಾರತಿಯಾ ಬೆಳಗಿರೇ ಕೋಲೇ || ೨೯ ||

ಮಂಗಲಾರತಿಯಾ ಬೆಳಗಿರೇ ಬಸುವಯ್ಯಗೇ
ನಾವು ಮಾಡುವಾ ಕಾರ್ಯಾ ಜಯವೆಂದೂ ಕೋಲೇ || ೩೦ ||
*****
ಹೇಳಿದವರು: ಶ್ರೀ ಮಂಜು ಬಡವ ನಾಯ್ಕ, ಹೊನ್ನಾಕುಳಿ, ೨೪/೧೦/೭೨

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತೆ ಪರಿವರ್ತನೆ ಜಗದ ನಿಯಮವೆಂದೊಡೆಂತು?
Next post ಹಾಡುಗಾರ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…