
ಆಸೆಯು ಮುಂದೆ ನಿರಾಸೆಯು ಹಿಂದೆ| ಆಮಿಷದಿಂದೆ ಬೇಸರ ಮುಂದೆ| ತಿಳಿದೂ ಅದರ ಹಿಂದೆ ಹೋದರೆ ನಾವೂ ಕುರಿ ಮಂದೆ|| ಬೆಳಕ ಜೊತೆಯಲಿ ನೆರಳಿರುವಂತೆ ದೀಪದ ಕೆಳಗಡೆ ಕತ್ತಲಿರುವಂತೆ ಆಸೆಯು ತುಂಬಾ ಚಿಕ್ಕದಿರಬೇಕು| ನಾಳೆಯ ಕಾಣಲಷ್ಟೇ ಆಸೆಯು ಬೇಕು ದುರಾಸೆಯ ...
ಪ್ರಕೃತಿಯಲಿ ಸೌಂದರ್ಯ ಕಾಣದೆಯೆ ಕುರುಡಾಗಿ ವಿಕೃತಿಯನೆ ನೋಡಿದೆನು ಅದು ಸತ್ಯವೆಂದು ಸುಕೃತಿಗಳನೊಪ್ಪದೆಯೆ ಎನ್ನದೇ ಸರಿಯೆಂದು ಆಕೃತಿಯ ದುಷ್ಕೃತಿಗೆ ಬಲಿಗೊಟ್ಟೆನಯ್ಯ. ನಾನು ದೊಡ್ಡವನೆಂದು ಹೆಮ್ಮೆಯಲಿ ಮೆರೆಯುತ್ತ ಮಾನಾಪಮಾನಮಂ ಲೆಕ್ಕಿಸದೆ ನಡೆದು ...
ಮುಳ್ಳುಗಳ ಮಧ್ಯದಲ್ಲಿಯೇ ಗುಲಾಬಿ ಹುಟ್ಟುತ್ತದೆ ನಿಜ. ಪ್ರೀತಿ ಹೂ ಅರಳುವ ಕ್ರಿಯೆ ನಿರಂತರ ನಡೆಯುತ್ತಲೇ ಇರುತ್ತದೆ ನೋಡು. ಅಮವಾಸ್ಯೆ ಕತ್ತಲಲ್ಲಿ ಏಕಾಕಿ ಕಾಡಿನಲ್ಲಿ ಪಯಣಿಸುತ್ತೇನೆ ನಿಜ, ರಾತ್ರಿ ಕಳೆದುಹೋದ ಸೂರ್ಯ ಮತ್ತೇ ಹುಟ್ಟುತ್ತಲೇ ಇರುತ್ತ...
ಸಾಲು ಮೆಟ್ಟಲುಗಳನೇರಲು ಹೊರಟರೆ ಸಾಲಭಂಜಿಕೆಗಳು ತಡೆದಾವೆ ಸಾಲಭಂಜಿಕೆಗಳು ತಡೆದಾವೆ ನಮ್ಮ ವಿಗಡವಿಕ್ರಮರಾಯನ ಕೇಳ್ಯಾವೆ ಒಂದೊಂದು ಸಾಲಿಗೆ ಒಂದೊಂದು ಪ್ರಶ್ನೆ ಇಪ್ಪತ್ತು ಬೊಂಬೆಗಳು ಕೇಳಿದರೆ ಒಂದೊಂದು ಬೊಂಬೆಗು ಒಂದೊಂದು ಉತ್ತರ ಜಾಣ ವಿಕ್ರಮರಾಯ ಹ...
ನನಗೂ ಆಸೆ ಕವಿತೆ ಬರೆಯಲು ಭಾರತಾಂಬೆಯ ಮೇಲೆ ಸತ್ಯವ ಮುಚ್ಚಿ ಸುಳ್ಳು ಹೇಳುವುದು ಥರವೆ? ಗೆಳತಿ ಹೇಳೆ ಭಾರತಾಂಬೆಯ ಒಬ್ಬ ಮಗ ಇರುವನು ಊರ ಒಳಗೆ ಇವನಿಗೆ ಸಹಜ ಭಾರತ ಮಹಾನ್ ನಾನು ಯಾರ ಧ್ವನಿಗೆ? ಮೈಲಿಗೆ ತೊಳೆದ ಗಂಗೆ ತುಂಗೆ ಕಾವೇರಿಗೆ ಒಂದೆ ನಮನ ಮನ...
ಎನ್ನ ದೇಹವೇ ಕನ್ನಡಾಲಯ ಕನ್ನಡ ಕನ್ನಡವೆನ್ನಲೇತಕೆ ಭಯ ಕನ್ನಡಕೆ ನಮೋ ನಮೋ ಎನ್ನುವೆ ಎನ್ನ ಮಂತ್ರವೊಂದೇ ಅದುವೇ ಕನ್ನಡ ಬಾಡದ ಹೂವಿನ ಮಾಲೆ ಈ ಕನ್ನಡ ನಂಬಿದರೆ ಕೈಬಿಡದೆಂದಿಗೂ ಈ ಕನ್ನಡ ಪ್ರೀತಿಯ ಕನ್ನಡವೇ ಎನ್ನುಸಿರು ತಾಯ್ತುಡಿಯಿಲ್ಲದೆನಗೆ ಬದುಕಿ...













