ನನ್ನವೀ ನುಡಿಗಳಿರ! ಕಾಲದಲೆಗಳಲಿ ನಿಮ್ಮನುರಿಹಣತೆಯಂತಿದೊ ತೇಲಬಿಡುವೆ, ಅನುಗೊಳಲಿ ಜಗದುಸಿರು ನಿಮಗೆದುರುಗೊಳಲಿ, ಆಳ್ವಿನಂ ಬಾಳ್ವುದೆಂಬುದೆ ನಿಮ್ಮ ಗೊಡವೆ. ತನ್ನ ಮರಿಗಳೊಳೊಮ್ಮೆ ಕಟ್ಟೆರಕೆ ಮೂಡಿ ದನಿತುಮಂ ಪೊರಮಡಿಸಿದುಲಿನಕ್ಕಿಯಮ್ಮ ಸಂಜೆಯೊಳವಂ ...

ಕಾರಿಕಾಯು ಕಡಜಲಕಾಯೂ ಕಡ್ದಾಟ ವಳ್ಳೇ ಗಂಡಗ್ ಹೋಗೂ ಪುಂಡೆರಗೆಲ್ಲಾ ಹೊಡ್ದಾಟಾ || ೧ || ಏ ಪಾರಂಬಾ ಪಾರಂಬಾ ಪಾರಂಬಾ ದಿನದಲ್ಲಿ ತಾಳೂಮದಲೀ ಕೊಣಿದಾಡೂ ಕೋಲೇ || ೨ || ಏ ತಟ್ಟಾನಾ ಕ್ಯಾದುಗಿ ಬುಟ್ಟಾನಾ ಮಲ್ಲುಗೀ ಪಟ್ಟಣಕೆ ಬಾ ನಮ್ಮ ತುರಾಯಕೇ || ೩ ...

ಆರೋಗ್ಯ, ಐಶ್ವರ, ಅವಕಾಶವಿಹುದಿಲ್ಲಿ ಹಿರಿದು ಸಾವಯವವೆಂದರದು ಬರಿದು ಒರೆದು ನೋಡಿದರಿದಕೆ ಹಿರಿ ಸಾಕ್ಷಿ ಸಿಗದು ತರತಮವು ವರ ಬರವು ಜಗದ ಸೂತ್ರವಿದ ನರಿದು ಮಾಡುವ ತಪದ ಪರಿ ಸಾವಯವ – ವಿಜ್ಞಾನೇಶ್ವರಾ *****...

ನಿನ್ನ ನೆನಪು ಕಂಪು ತಂಪು ಪ್ರೀತಿ ತಳಿರ ತೋರಣಾ ಹಗಲು ಸಂಪು ಇರುಳು ಇಂಪು ಚಂದ್ರ ತಾರೆ ಪ್ರೇರಣಾ ನಿನ್ನ ಮರೆತು ಬದುಕಲೆಂತು ಎದೆಯ ಪಟಲ ತೆರೆದೆನು ನಿನ್ನ ವಿರಹ ತಾಳಲೆಂತು ಕಣ್ಣ ನೀರ ಕುಡಿದೆನು ನೀನೆ ನನ್ನ ಹಾಲು ಬೆಲ್ಲಾ ನೀನೆ ಶಾಂತಿ ಸಾಗರಾ ನೀನ...

ಸೈರಿಸು ಮಗಳೇ ಹೈರಾಣವಾಗದಿರು ಶತ ಶತಮಾನಗಳಿಂದ ಬಂದ ಗತ್ತು ಗಮ್ಮತ್ತು ಶಾಶ್ವತವಲ್ಲ. ಹೊಸದಂತೂ ಅಲ್ಲ. ಅಟ್ಟವೇರಿದವರು ಇಳಿಯಲೇ ಬೇಕಲ್ಲ ನಿನ್ನವ್ವ ನನ್ನವ್ವ ಅವರವ್ವ. ತುಳಿದದ್ದು ಒಂದೇ ಹಾದಿ ಕಲ್ಲು ಮುಳ್ಳಿನ ಗಾದಿ ನಾಲ್ಕು ಗೋಡೆಗಳಲ್ಲೇ ಚಿತ್ತಾರ...

ಕೆಂಪು ನಿಯಾನ್ ಲೈಟಿನ ಬೆಳಕಲ್ಲಿ ಕರೀ ರಸ್ತೆ ಮೈ ಕಾಯಿಸಿಕೊಂಡು ಉದ್ದುದ್ದ ಹರಿದ ರಾತ್ರಿ, ರಸ್ತೆಯ ತುದಿಯ ಮರದ ನೆರಳು ದೂರದಿಂದ ಭೀಮಾಕೃತಿ. ಮುರಿದ ಒಣಗಿದ ಬಾಳೆಯಲೆಯಂತೆ, ಅಲ್ಲಲ್ಲಿ ಚದುರಿದ ಕಸಗಳು ಮೆಲ್ಲಗೆ ಬೀಸುವ ಗಾಳಿಗೆ ಅತ್ತಿಂದಿತ್ತ ಚಲಿಸ...

ಅನಂತ ಅನಂತವಾಗಿರು ಮನವೆ ತಾಮಸ ಬೇಡ ನಿಸ್ವಾರ್‍ಥದ ಹಣತೆಯ ಹಚ್ಚು ನೀ ಓ ಮನವೆ ಕನ್ನಡ ಕನ್ನಡ ಎಂದುಲಿಯ ನೀ ಮನವೆ ದುಡಿದ ಮನಕೆ ತಣಿವ ಜಲವೆ ತಲ್ಲಣವೇಕೆ ನಿನಗೆ ಮಣಿವೆ ಧರೆಗೆ ಎಂದೆಂದಿಗೂ ನೀನು ಮಣ್ಣಿನ ಕಣ್ಣೆ ಎಂದೊಲಿದು ನಲಿಯೆ ಮನವೆ ಕನ್ನಡ ಕನ್ನಡ...

ಧರ್‍ಮದ ಹೆಸರು ದೇಶದ ತುಂಬ ಸಾವಿರ ಸಾವಿರ ಸಾವುಗಳು ಮರೆಯುವ ಮಠಗಳ ಪೀಠದ ಕೆಳಗೆ ನರಳುವ ಅಸಂಖ್ಯ ನೋವುಗಳು. ಧರ್‍ಮದ ದಳ್ಳುರಿ ದವಡೆಗೆ ಸಿಕ್ಕಿ ಜಜ್ಜಿಹೋಗಿದೆ ಮಾನವೀಯತೆ ‘ಸರ್‍ವ ಜನರಿಗೆ ಸುಖ’ ತುತ್ತೂರಿ ಹೂತು ಹೋಗಿದೆ ಸಮಾನತೆ. ಗೊಡ್ಡು ಧರ್‍ಮಗಳ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...