ಕಾರಿಕಾಯು ಕಡಜಲಕಾಯೂ ಕಡ್ದಾಟ ವಳ್ಳೇ
ಗಂಡಗ್ ಹೋಗೂ ಪುಂಡೆರಗೆಲ್ಲಾ ಹೊಡ್ದಾಟಾ || ೧ ||

ಏ ಪಾರಂಬಾ ಪಾರಂಬಾ ಪಾರಂಬಾ ದಿನದಲ್ಲಿ
ತಾಳೂಮದಲೀ ಕೊಣಿದಾಡೂ ಕೋಲೇ || ೨ ||

ಏ ತಟ್ಟಾನಾ ಕ್ಯಾದುಗಿ ಬುಟ್ಟಾನಾ ಮಲ್ಲುಗೀ
ಪಟ್ಟಣಕೆ ಬಾ ನಮ್ಮ ತುರಾಯಕೇ || ೩ ||

ಏ ಪಾರಂಬಾ ಪಾರಂಬಾ ಪಾರಂಬಾ ದಿನದಲಿ
ತಾಳೂಮದಲೀ ಕೊಣಿದಾಡೂ ಕೋಲೇ || ೪ ||

ಅಪ್ಪನಾಯ್ಕನ ಗುಡಿಯಾ ಮೇಲೊಂದ್ ಇಪ್ಪತ್ತೇಳ್ ನೇಗಿಲಾ
ಆಡಬಂದ್ ಬೇಡಬಂದ್ ಗಿರಿಯಾ ಸಂದಾನಾ || ೫ ||

ತಾರಕನಾ ಗುದ್ದೀಗ್ ವರ್ಸಕೊಂದ್ ನೇಗ್ಲಾ
ಆಡಬಂದ್ ಬೇಡಬಂದ್ ಗಿರಿಯಾ ಸಂದಾನಾ || ೬ ||

ಏ ಪಾರಂಬಾ ಪಾರಂಬಾ ಪಾರಂಬಾ ದಿನದಲಿ
ತಾಳೂಮದಲೀ ಕೊಣಿದಾಡೂ ಕೋಲೇ || ೭ ||

ಏ ಜಡನಾ ಜೋರ್‌ಕಾಯ್ ಗರೂಡಾ
ನೀ ಯೇನ ಕಂಡಿ ಮಾತಾನಾಡ್ದಿ ಗರೂಡಾ? || ೮ ||
*****

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.