ದುಃಸಾಧ್ಯಸಂಭಾವ್ಯವೆಂಬ ಸೊಲ್ಲಿನ ಗುಲ್ಲು ಗುಡುಗಾಡುತಿದೆ. ಕನ್ನಡದ ಕನ್ನಡಿಯು ಒಡೆದು ಬೆಸೆಯ ಬರದಂತೆ ದೆಸೆದೆಸೆಗೆ ಬಿದ್ದಿದೆ. ಹಿಡಿದು ಕಟ್ಟಬಲ್ಲಾ ಕೈಯೆ ಕಾಣದಿದೆ. ಒಡಹುಲ್ಲು ಬೆಳೆಯೆ, ಹೂದೋಟ ಹುದುಗಿದೆ ನೆಲದೊಳೆಲ್ಲೆಲ್ಲು. ದನದ ಜಂಗುಳಿಯಂತೆ ...

ಎಂದಾದರೆಲ್ಲಾದರುಂ ತಿನಲೆಮಗಪ್ಪುದಷ್ಟೇ ಅಂದೀ ಮನುಜ ಕುಲವುದಿಸಿದಂದೆಷ್ಟೋ ಅಷ್ಟೇ ಉಂಬುದಷ್ಟಾದೊಡಂ ಹತ್ತಾರುಪಟ್ಟಧಿಕ ಕಷ್ಟ ವಿಂದದನು ಗಳಿಸಲಾ ದೂರದ ಪೇಟೆ ಯಂಗಡಿ ಸೇರಿಸಲೆಲ್ಲ ಶಕುತಿಯು ನಷ್ಟ – ವಿಜ್ಞಾನೇಶ್ವರಾ *****...

ಬೆಂಕಿಗೆ ಬಂದ ನಮನ ಮಾಡ್ದ ಕಂಚನ ರೊಕ್ಕ ಕಯ್ಯಲ್ ಕೊಟ್ಟೆ ಡುಂಕ ವೈಕೊಂಡ ಹೋದನೇ || ೧ || ಸೊಣ್ಣಕ್ಕೆ ಬಂದ ನಮನ ಮಾಡ್ದ ಕಂಚನ ರೊಕ್ಕ ಕಯ್ಯಲ್ ಕೊಟ್ಟೆ ಡುಂಕ ವೈಕೊಂಡ್ ಹೋದನೇ || ೨ || ನೀರಿಗೆ ಬಂದಾ ನಮನ ಮಾಡ್ದ ಕಂಚನ ರೊಕ್ಕ ಕಯ್ಯಲ್ ಕೊಟ್ಟೆ ಡುಂಕ...

ಇಂದು ನನ್ನ ಮನ ಮಲಿನ ವಾಯ್ತು ಸುಳ್ಳು ಮೋಸಗಳ ಹುಟ್ಟಿಸಿತ್ತು ಸುಖದ ಬಾಳಿನ ಗುರಿಗೆ ಯಾವುದಕ್ಕೆ ಹೇಸದೆ ವಟಗುಡಿಸಿತು ತೂತು ಹೊಂದಿದ ಮಡಕೆಯಲಿ ನೀರು ತಾನೇ ನಿಲ್ಲಬಹುದೆ ಆತ್ಮ ಸತ್ಯದ ದಾರಿಯಲ್ಲಿದಾಗ ಸುಳ್ಳಿದ್ದರೆ ಆತ್ಮ ನಲಿಯಬಹುದೆ! ಹೃದಯದ ಮನೆಯಲ...

ಸಾವಿರಾರು ನದಿಗಳು ಸೇರುವಂತೆ ಸಾಗರ ಸೇರಬೇಕು ಕನ್ನಡ ಸಾವಿರಾರು ಮನಗಳ ಸಾವಿರಾರು ಕನ್ನಡ ಊರು ಕೇರಿ ಹಿತ್ತಿಲು ಆಗುವಂತೆ ಜನಪದ ಆಗಬೇಕು ಕನ್ನಡ ಸಾವಿರಾರು ಮನಗಳ ಸಾವಿರಾರು ಕನ್ನಡ ಪಚ್ಚೆ ಪೈರು ನೆಲ ಮನೆ ತುಂಬುವಂತೆ ಹರುಷ ತುಂಬಬೇಕು ಕನ್ನಡ ಸಾವಿರ...

ದಿವಸಾವಸಾನದೊಳು ಬುವಿಯ ನುತಿಗೆಚ್ಚರಿಸೆ ‘ಮುನಸ್ಸೀನ’ನಂದದೊಳು ಅಸ್ತಗಿರಿಯ ರವಿಯಡರಿ ರಂಜಿಸಿಹ- ನವನ ಪಾವನ ಕಾಂತಿ ಅವತರಿಸಿ ಹರಸುತಿದ ಅಂಜುವಿಳೆಯ. ಇನಿಯನೊಲಿಯಲಿ ಎಂದೊ ಮನದಾಸೆ ಸಲಲೆಂದೊ- ಎನಗರಿಯದಾ ಹರಕೆ-ಮುಗಿಲ ಕರೆಯ ಹೊನಲಿನೊಳು...

ಲೋಕದಲಿ ಕಷ್ಟಗಳು ಬಂದರೆ ನಿನ್ನ ಮನೆ ಬಾಗಿಲಿಗೇ ಏಕೆ ಬಂದವು ಹೇಳು? ನಿನ್ನ ಕಷ್ಟಗಳೇ ಲೋಕವಲ್ಲ ಹೆರವರ ಕಾಲಿಗೆ ಚುಚ್ಚಿದ ಮುಳ್ಳನೊಮ್ಮೆ ತೆಗೆದಾದರೂ ನೋಡು ಆಗ ಹೇಳು ನಿನಗೆ ಹೇಗನಿಸುತ್ತದೆ? ಖಡ್ಗದಿಂದಾದ ಗಾಯಕ್ಕಿಂತ ನಾಲಿಗೆಯ ಮಾತುಗಳ ನೋವು ಎಷ್ಟಿ...

ರಾಗ ಯಮುನಾಕಲ್ಯಾಣಿ-ತಾಳ ಧುಮಾಳಿ ಯಾವ ಭಾಗ್ಯದಿಂದಿಲ್ಲಿಗೆ ಬಂದೆ? ನಿನ್ನ ಕಂಡು ಧನ್ಯನಾದೆ ತಂದೆ! ಇನ್ನಾದಡಮೆನಿಸೆನ್ನೆದೆಯಿಂದೆ- ಜಯ ಜಯ ಪಂಢರಿನಾಥ ವಿಠೋಬಾ! ||೧|| ತುಕಾರಾಮ ನಾಮದೇವರಿಲ್ಲಿ ಕುಣಿದ ರಂಗಸಿಲೆಯಿಂ ೧ಸೆಲೆವಲ್ಲಿ ನಿನ್ನ ನಾಮಮೆದೆಯೊ...

ಬಂಡವಾಳವಾಗುತಿದೆ ಕನ್ನಡ ಭಾಷೆ – ನಮ್ಮ ಕನ್ನಡ ಭಾಷೆ ಬಂಡವಾಳವಾಗುತಲಿ ಅಳಿದು ಹೋಗುತ್ತಲಿದೆ ಕನ್ನಡ ಭಾಷೆ – ನನ್ನ ಕನ್ನಡ ಭಾಷೆ ಓಟಿಗಾಗಿ ಸೀಟಿಗಾಗಿ ಜನರ ಕುಣಿಸೊ ನೋಟಿಗಾಗಿ ಕನ್ನಡವನೆ ನಂಬಿಹರು ಸ್ವಾರ್ಥಭರಿತ ಧೂರ್ತರು ಎತ್ತ ಹೋದರ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...