ಕೈಲ್ ಕಿಸೀದೆ ಕರ್‍ಮಾಂತ್ ಕಿರ್‍ಲೋ ಕಂಜೋರ್ ಆದ್ಮಿ! ಬಕ್ರ! ಕೈಲ್ ಆಗೋರ್‍ನು ಕೆಳಕ್ ಎಳಿಯೋನು ನೀನ್ ಎಲ್ ಉಟ್ದೊ! ವಕ್ರ! ೧ ಕರ್‍ಮಾಂತ್ ಅಂದ್ರೆ – ಯಿಂದ ನಾವ್ ಆಕಿದ್ ಬೀಜದ್ ಊ ಅಣ್ ಅಲ್ಲ! ಕರ್‍ಮಾಂತ್ ಅಂದ್ರೆ – ಈಗ್ ನಾವ್ ಸಿಕ್ದ...

ಹುಡುಗ ಹಾಡುತಿತ್ತು, ಮತ್ತೆ ಆಡುತಿತ್ತು, ನಡುನಡುವೆ ಓಡುತಿತ್ತು; ಹುಡಗ ಕೆಲೆಯುತಿತ್ತು, ಹಾಗೆ ಕುಣಿಯುತಿತ್ತು, ಏನೋ ತೊದಲಾಡುತಿತ್ತು. ಏನು ತಿಳಿಯತಿತ್ತೊ! ಏನು ಹೊಳೆಯುತಿತ್ತೊ! ಕೈಹೊಯ್ದು ನಗುತಲಿತ್ತು; ಏನು ನಿಟ್ಟಿಸುತಿತ್ತೊ! ಏನು ದಿಟ್ಟಿಸು...

ಅಂತರಂಗದ ದೋಷಗಳನೊಂದಷ್ಟು ಕಳೆವ ಸಂಗೀತಕಷ್ಟಿಷ್ಟು ಶಕ್ತಿ ತುಂಬುವ ಪಕ್ಕವಾದ್ಯ ದಂದದಲಿ ಮಿತಿಯೊಳಿದ್ದರೆ ಯಂತ್ರ ತಂತ್ರಗಳಾದವು ಸುಂದರ ಜೀವನಕವು ಬಲವಪ್ಪ ಹಿಡಿ ಕಾವು ಸುಂಮನುದ್ದ ಮಾಡಿದೊಡೇನು ಗುದ್ದಲಿಯ ಕಾವು – ವಿಜ್ಞಾನೇಶ್ವರಾ *****...

ಆಡ ಬಂದಿದೇ ಬಾರೇ ಗೀಜಗತೀ ಓಡ ಬಂದಿದೇ ಬಾರೇ ಗೀಜಗತೀ || ಪಲ್ಲವಿ || ಗೀಜಗ್ತಿ ಮನೆಯಲ್ಲಿ ಶ್ರೀಗಂಧ ಪರಿಮಳ ಆಡ ಬಂದಿದೇ ಬಾರೇ ಗೀಜಗತೀ || ೧ || ತೂಕದ ಹಾರವ ಹಾಕೀದ ಬಳಗವ ನಾರೀಯೋರೆಲ್ಲ ಕೂಡಿಲಿಡ ಬಂದಿದೇ ಆಡ ಬಂದಿದೇ ಬಾರೇ ಗೀಜಗತೀ || ೨ || ಮಣಿಮ...

ನಾವು ಆ ನಗರದ ವಾಸಿಗಳು ಆನಂದ ಸ್ವರೂಪಿಗಳು ಬಾಳಿನಲಿ ಚೈತನ್ಯ ತುಂಬಿದವರು ಆತ್ಮರೂಪಿಗಳು ಅಶೋಕನಗರ ನಮ್ಮ ತಾಣ ಅಲ್ಲಿ ದುಕ್ಕವಿಲ್ಲ ಲ್ಲೆಲ್ಲವೂ ಶಾಂತಿಯೇ ಶಾಂತಿ ಅಲ್ಲಿ ರೊಕ್ಕವಿಲ್ಲ ಬದುಕಿನಲಿ ಕನಸುಗಳಿಲ್ಲ ಭೂತಕಾಲವಿಲ್ಲ ಭವಿಷತ್ತು ನಮ್ಮದಲ್ಲ ಭಕ...

ಗಂಡಾಂತರಕೆ ಮೈ- ಯೊಡ್ಡುವವ ನಾಯಕ ತಾನೇ ಕಾಯಕ ಮಾಡುವವ ನಾಯಕ ಎಲ್ಲರಿಗುಣಿಸಿ ತಾ- ನುಣುವವ ನಾಯಕ ಜನ ಹಸಿದು ಸಾವಾಗ ತಾ- ನುಣ್ಣದವ ನಾಯಕ ಎಲ್ಲರು ಮಲಗಿರಲು ತಾನೆಚ್ಚರ ಇರುವವ ನಾಯಕ ಹೊಗಳಲಿ ತೆಗಳಲಿ ಹಚ್ಚಿ- ಕೊಳ್ಳದವ ನಾಯಕ ಹೆಣ್ಣು ಹೊನ್ನು ಮಣ್ಣೆಂ...

ಆ ಕುಳಿಯಿನೊಗೆದೆನ್ನ ಸೌರಭದ ಮುಗಿಲುಗಳ್ ಗಾಳಿಯೊಡವೆರೆದು ಹಬ್ಬುತ್ತಲಾ ಕಡೆಯೊಳ್ ದಾರಿ ನಡೆವೆಲ್ಲ ಭಕ್ತ ವಿರಕ್ತರನು ಕವಿದು ಬೆರಗುವಡಿಸುತಲೆನ್ನ ಬದಿಯೊಳುರುಳಿಸಲಿ. *****...

ಮನೆಯಲ್ಲ ಮಠವಲ್ಲ ರಾಜನರಮನೆಯಲ್ಲ ಇದು ನಾಟ್ಯ ಮಂದಿರ ಛಾತ್ರ ಸತ್ರವಲ್ಲ ಜೀವ ಬಯಸುವ ಭೋಗದುಪಕರಣವಲ್ಲವಿದು ಆವರ್ಥ ಘಟಿಸಿತೀ ತೆರ ಮಲೆಯ ಕಲ್ಲ? ಗೋಪುರದ ತುದಿಯಲ್ಲಿ ಬಾನನೆತ್ತುತ ನಿಂತು ಇರುಳಿನೊಳು ಮಿರುತಾರಗೆಯ ಮಾಲೆಗೊಳುತ ಮೋಡ ಮುತ್ತುವ ಜಡೆಗೆ ಜ...

ಗಾಢ ಮೌನ ಆವರಿಸಿದರೆ ಕರಾಳ ಕಾರಿರುಳ ಕತ್ತಲೆಗೆ ಹೆದರುತ್ತೇನೆ ಬಹಳ ಮೌನವನು ಸೀಳಿ ಬರುವ ಆ ಆಕ್ರಂದದ ಕೂಗು ಭಯಂಕರ ಸ್ಫೋಟದ ಶಬ್ದ ಮೈ ಮನಗಳ ಸುಳಿಯಲ್ಲಿ ನಡುಕ ಹುಟ್ಟಿಸುತ್ತದೆ. ಮಧ್ಯ ರಾತ್ರಿಯ ಕರಾಳ ಕತ್ತಲೆಯ ಗಾಢ ಮೌನದ ಗರ್‍ಭ ಸೀಳಿ ಹೊರಬಂದ ಕರು...

-ಪರಾಕ್ರಮಿಗಳಾದ ಪಾಂಡವರನ್ನು ಬಗ್ಗುಬಡಿಯಲು ಮೋಸದ ದಾರಿಯನ್ನು ಹುಡುಕಿದ ದುರ್ಯೋಧನನು, ತನ್ನವರೊಂದಿಗೆ ಮಾತಾಡಿ ದುಷ್ಟಯೋಜನೆಯೊಂದು ರೂಪಿಸಿದನು. ಶಕುನಿಯ ಸಲಹೆಯ ಮೇರೆಗೆ ತಂದೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ, ಪಾಂಡವರನ್ನು ಆತಿಥ್ಯ ಸ್ವೀಕರಿಸಲು...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...