ಮುನಿಯನ್ ಮೊಕ್ಕ್ ಮೂರ್ ನೀರು

ಕೊಕ್ರೆ ಮೀನ್ಗೆ ವೊಂಚ್ ಆಕ್ದಂಗೆ
ಕಪ್ಪೇಗ್ ಆವು ಕಾಯ್ಕೊಂಡಂಗೆ
ನಿಂತ್ಕಂಡೌನೆ ಮುನ್ಯ!
ಯೆಂಡಾ ಮಾರೋ ಗೆಣ್ಯ!
ಕುಡಿಯೋರ್‍ನ್ ಇಡದಿ ಸುಲದಾಕೋಕೆ
ಮಡಗೌನ್ ಎಂಡದ್ ಮನೆಯ! ೧

ಕುಡಿಯೋರ್‍ಗ್ ಎಂಗಿದ್ರೇನು! ಬುಂಡೆ
ತುಂಬಿದರಾಯ್ತ್ ಅಂದ್ ಮುನ್ಯ ಯೆಂಡಕ್
ನೀರ್ ಗೀರ್ ಬೆರಸಿ ಮಾರಿ
ತೊಟ್ ತೊಟ್ಗೂನೆ ವೋರಿ
ಬಡವನ್ ಜೀತದ್ ಪುಡಿಕಾಸ್ನೆಲ್ಲ
ಕೆರಕೋಂತೌನೆ ಗೋರಿ! ೨

ಮೈಯಿನ್ ರಕ್ತ ನೀರ್ ಮಾಡ್ಕೊಂಡಿ
ಬೆವರಿನ್ ಮಳೇಲ್ ಕಾಸ್ ಕೆರಕೊಂಡಿ
ನೆಟ್ಗೆ ಬಂದ್ರೆ ಇಲ್ಗೆ
ಮೋಸಮಾಡ್ತ ಮೆಲ್ಗೆ
ಬತ್ಕೊಂಡ್ ಒಟ್ಟೇನ್ ಬಗದಿರಕೋಳೊ
ಡೊಳ್ಳೀನ್ ಆಕ್ಬೇಕ್ ಗಲ್ಗೆ! ೩

ಕೊಟ್ಟಿದ್ನೆ ಯಿಂದಕ್ ಕೊಟ್ಟೋನು
ಕೊಟ್ಟಿದ್ಕಿಂತ ಯೆಚ್ ಕೊಟ್ಟೋನು
ಮನ್ಸಾನೆ ಅಂತಂದ್ರೆ-
ದೇವ್ರೆ ಔನ್ ಅಂತಂದ್ರೆ-
ಕೊಟ್ಟಿದ್ನೂನೆ ಕೊಡದಿದ್ದೋನ್ಗೆ
ಯೆಸರ್ ಇಕ್ಕೋದೆ ತೊಂದ್ರೆ! ೪

ಕಾಸ್ ಈಸ್ಕೊಂಡಿ ಕಸ ಕೊಟ್ಟಿ
ದರ್‍ಮ ಗಿರ್‍ಮ ಮೂಲೇಗ್ ಇಟ್ಟಿ
ದುಡ್ ಕೂಡಾಕೋನ್ ಯಾರು?
ಬೋಗಳ ತಿನ್ನೋನ್ ಯಾರು?
ಎಲ್ಲಾರೂನೆ ಯೋಳಾದಂದ್ರೆ
‘ಮುನಿಯನ್ ಮೊಕ್ಕ್ ಮೂರ್ ನೀರು!’ ೫

ಯಿಂದ್ ಇಬೀಸ್ನ ಕೈ ಕೈ ಮುಗದಿ
ರಾವಣಂಗ್ ಏಳ ಕಡೇಗ್ ಉಗದಿ
ಅನ್ಯಾಯ ಬೇಡಾಂತ!
ನ್ಯಾಯಾನೆ ಮಾಡಂತ!
ತಿಳದೋನ್ ಮಾತ್ರ ಮೂಲೇಗ್ ಆಕ್ದೋನ್
ಗತಿ ಏನಾಯ್ತೂಂತ! ೬

ಬಡವನ್ ತಿನ್ನೊ ಸಿರಿಮಂತಮ್ಮ
ಮುನಿಯಂಗ್ ಅಕ್ಕ! ಇವನೆ ತಮ್ಮ!
ಮುನಿಯಂಗ್ ಅಕ್ಕನ ಚಾಳಿ
ಮನೇ ಮುರಿಯೋ ಗಾಳಿ!
ಯೋಳಿದ್ ಕೇಳ್ದಿದ್ರ್ ಯಾರ್‍ಗೇನಂತೆ?
ಎಕ್ಕ ವುಟ್ಟೋಗ್ಲೇಳಿ! ೭
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಿದಂಬರ
Next post ಸುಸಂಸ್ಕೃತ ಭಾರತ ಮತ್ತು ಹೆಣ್ಣು ಭ್ರೂಣ ಹತ್ಯೆ

ಸಣ್ಣ ಕತೆ

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…