ಹಿಂಸೆ ಏಕೆ!

ನಿನ್ನ ಮನವು ಮೃದುವಿನಂತೆ ಕಠಿಣವೊ!
ಹಾಗೆಂದು ನಿನ್ನಲ್ಲಿ ಪ್ರಶ್ನೆ ಹಾಕಲೆ
ಹೌದು ಸಕಲ ಜೀವಿಂಗಳಲಿ ದಯೆ ನಿಡಿ
ಮರು ಕ್ಷಣವೆ ಪ್ರಾಣಿಗಳಿಗೆ ಕೀಟಲೆ

ಜೀವನ ನಿದ್ರಾ ಭಯ, ಕಾಮ
ಸಕಲ ಜೀವಿಂಗಳ ಇಂಗಿತವದು
ನಿಷ್ಟಾಪದಿ ನಿನಾ ಆಹಾರ ಕದ್ದರೆ
ವೈಚಾರಿಕ ನೀನಗಿಯೂ ಕೊಲ್ಲುವುದು

ಮನುಜ ದಯತೋರದಿರ್‍ದಡೆ
ಪ್ರಾಣಿಗಳ ಅವಸಾನ ನಿಶ್ಚಿತವು
ಎಲ್ಲವೂ ನಷ್ಟಿಸಿ ನೀನೆ ಬಾಳಬೇಕೆಂಬ
ತಿಳಿಯದೇ! ನಿನ್ನ ಬದುಕು ಅಶ್ಚಿತವು

ವೇದಾಂತ ಮಾತುಗಳ ಹೇಳಿದರಾಗದು
ನಿನ್ನ ಹೆಜ್ಜೆ ಹೆಜ್ಜೆಗಳಲೆ ಅವು ಕಾಣಬೇಕು
ನಡೆಯುವಾಗ ನಿಂತಾಗ ಕುಳಿತಾಗ
ಪ್ರಾಣಿಗಳ ಹಿಂಸಿಸದಂತೆ ಎಚ್ಚರಬೇಕು

ನಿನ್ನ ಒಂದೊಂದು ಕರ್‍ಮಗಳೆಲ್ಲ
ದೇವನ ಪುಸ್ತಕದಲಿ ಪ್ರಕಟವಾಗಿದವು
ಶುದ್ಧ ಕರ್‍ಮ ಶುದ್ಧ ಜೀವನ ಮಾತ್ರ
ಮಾಣಿಕ್ಯ ವಿಠಲನ ನೆನದವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೨೫
Next post ಮಲ್ಲಿ – ೩

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…