ದೂರದೊಂದು ಹಾಡಿನಿಂದ ಮೂಡಿಬಂದ ಕನ್ನಡ; ನನ್ನ ಮುದ್ದು ಕನ್ನಡ ಕಾಣದೊಂದು ಶಕ್ತಿಯಿಂದ ಉಸಿರಿಗಿಳಿದ ಕನ್ನಡ; ನನ್ನ ಪ್ರಾಣ ಕನ್ನಡ ನೀಲಿ ಕಡಲ ಅಲೆಗಳಿಗೆ ದನಿಯ ಕೊಟ್ಟ ಕನ್ನಡ; ಸಪ್ತಸ್ವರ ಕನ್ನಡ ತೇಲಾಡುವ ಮೋಡಗಳಿಗೆ ಮುತ್ತನಿಟ್ಟ ಕನ್ನಡ; ಸಹ್ಯಾದ್ರಿ...

ವರುಷ ವರುಷಕ್ಕೊಮ್ಮೆ ಹುಟ್ಟು ಹಾಕುವರು ನಿನ್ನ ಮೆಟ್ಟಿ ನಿಲ್ಲುವರು ಕನ್ನಡ ಕನ್ನಡವೆಂದು ಎಲೈ ತಾಯೆ ಇಂಥ ಜೀವಿಗಳಿಗೆ ನೀಡು ಚೈತನ್ಯ ನಿನ್ನ ಗುಣಗಾನ ಮಾಡುವರು ಇವರೇ ಊರ ಮನೆಯವರು ಇವರ ಭಂಡತನದ ಬದುಕಿಗೆ ನೀಡು ಚೈತನ್ಯ ಅಂದು ನಿನ್ನ ರಕ್ಷಣೆಗಾಗಿ ಪ್...

ಸಾಯುತ್ತಿರುವ ಒಂದು ಪಶುವಿಗೆ ಆಸೆ ಭಯ ಯಾವುದೂ ಇಲ್ಲ; ಕೊನೆಯ ಕಾಯುತ್ತಿರುವ ಮಾನವನಿಗೇ ಆಸೆ ಭಯಗಳ ಕಾಟವೆಲ್ಲ; ಸಾಯುವನು ಎಷ್ಟೋಸಲ – ಸತ್ತು, ಹುಟ್ಟಿಬರುವನು ಮತ್ತು ಮತ್ತೂ ದೊಡ್ಡ ಜೀವದ ಥರವೆ ಬೇರೆ ಕೊಲೆಪಾತಕರ ಎದುರಿಸುತ್ತ ಎಗ್ಗಿಲ್ಲದೇ ...

ಭೂಗರ್‍ಭಶಾಸ್ತ್ರಜ್ಞನೆತ್ತಿ ಹಿಡಿದನು ಕೊಳದ ತಳಕಿರುವ ಶಿಲೆಯೊಂದ ಬಂಡೆಗಲ್ಲದು ಸವೆದು ಹರಳಾದುದೆನ್ನುವನು, ಮತ್ತದರ ಮೇಲುಳಿದ ಮರದ ಕಿರಿಯಾಕೃತಿಯದಿಂತು ಮುದಿಮರ ತವಿದು ಕೊಳದ ನೀರಿನ ಕೆಳಗೆ ಬಿದ್ದಿರಲರೆಯ ಕೂಡಿ ಕಾಲೋದಧಿಯ ಹೊನಲ ತೆರೆತೆರೆಗೆ ತಲೆಬ...

ನಾನೆ ಗೋಪಿಕೆ ಬಾರೊ ಗೋಪನೆ ನೋಡು ಚಂದನ ಜಾರಿವೆ ಗುಡ್ಡ ಬೆಟ್ಟದ ಗಾನ ಹಕ್ಕಿಯ ಕಂಠ ಕೊರಗಿ ಸೊರಗಿದೆ ಮಳೆಯ ನೀರಿಗೆ ಹಸಿರು ಹಸಿದಿದೆ ಹನಿಯ ರೂಪದಿ ಚುಂಬಿಸು ಮಂದ ಗಾಳಿಯು ಸೋತು ನಿಂದಿದೆ ಗಂಧ ರೂಪದಿ ನಂಬಿಸು ನೋಡು ಕಡಲಿನ ಕನ್ಯೆ ಬಂದಳು ಗೆಜ್ಜೆ ಜಾ...

ಬೇವಾರ್‍ಸಿ! ನನ್ ಪುಟ್ನಂಜೀನ ರೂಪಾನ್ ಆಡ್ತಿನಿ ಬಾಪ್ಪ! ನಂಗ್ ಆಗಾಗ್ಗೆ ಆಡೀಸ್ತೈತೆ ನನ್ ಪುಟ್ನಂಜೀ ರೂಪ! ೧ ಆಲ್ನಲ್ ಕಮಲದ್ ಊ ತೇಲ್ಬುಟ್ಟಿ ಮೇಲ್ ಒಂದ್ ತೆಳ್ನೆ ಲೇಪ ಚಿನ್ನದ್ ನೀರ್‍ನಲ್ ಕೊಟ್ಟಂಗೈತೆ ನನ್ ಪುಟ್ನಂಜೀ ರೂಪ! ೨ ಅಮಾಸೇಲಿ ಅತ್ತೀಸ್...

ನನ್ನೆದೆಯು-ನಿನ್ನೆದೆಯು; ನಡುವೆ ಕ್ಷಾರೋದಧಿಯು! ಕಾಡಿನಲಿ ಅತ್ತಂತೆ ಎಲ್ಲ ಹಾಡು! ತಂತಮ್ಮ ಕಂಬನಿಯಲೆಲ್ಲರೂ ಮುಳುಗಿದರೆ ಕೆಳೆಯ ಬೇಡುವ ಎದೆಗೆ ಯಾರು ಜೋಡು? ಅರಿವಿನಾಳದೊಳಿರುವ ಅಣಿಮುತ್ತುಗಳನೆತ್ತಿ ಪವಣಿಸುವ ಜಾಣು ಬಗೆಗೆಂದು ಬಹದೊ? ಸೂಜಿಗೂ ಹದನ...

ಬಿಗುವನೆಲ್ಲವ ಹಗುರ ಮಾಡುವ ನಗುವೆ ನೆಲದ ನೆಕ್ಕರೆಯಾಗಿ ಚಿಗುರಿಹುದಿಲ್ಲಿ ನೋಡಾ ತಂಬುಳಿ ಗಾಗಿ ಹೊಟ್ಟೆಯುರಿ ಕಳೆವನು ರಾಗಿ ನಗಲೆಂದೆಲ್ಲರೊಂದಾಗಿ – ವಿಜ್ಞಾನೇಶ್ವರಾ *****...

ಕಲ್ಲ ಕಡದೇನೋ ಬಾವಾ? ಕಬ್ಬ ನೆಟ್ಟೇ ನಾ ಬೆಳಗಲ ಕಡದೇನೋ ಬಾವಾ? || ೧ || ಬಾವೀ ತೋಡದ್ಯೇನೋ? ಕಬ್ಬಾ ನೆಟ್ಟೇನೇ ನಾನಾ ಕಬ್ಬಾ ನೆಟ್ಟೇ ನಾ || ೨ || ಕಬ್ಬಾ ಕಡಕೊಡೋ ಬಾವಾ ಕಬ್ಬಾ ಕಡಕೋಡೋ ಇವತ್ತಾ ಕಬ್ಬಾ ಕಡಕೊಟ್ಟ ಮ್ಯಾಲ || ೩ || ಯಾವಾಗ ತೀರಿಸುವೇ...

ಬದುಕು ಎಲ್ಲರದು ಬೆಳಕಾಗಲಿ ಅವರ ಅಂತಃಕರಣ ಶುದ್ಧವಾಗಲಿ ಹೃದಯ ಮಲೀನತೆ ಹೋಮ ಗೈಯಲಿ ಸದಾ ನಾಲಿಗೆ ಮೇಲೆ ರಾಮ ನಾಮವಿರಲಿ ಕ್ಷಣದ ಬಾಳಿದು ನಶ್ವರ ಜೀವನ ಈ ಜೀವನವೊಂದೇ ಸುವರ್‍ಣಾವಕಾಶ ನರ ಜನುಮದಲಿ ನಾಮ ಸಂಕೀರ್‍ತನ ಗೈಯಲಿ ಈ ಬಾಳಿನಲ್ಲೆ ಪಡೆಯಲಿ ಮುಕ್...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...