ಸಾಯುತ್ತಿರುವ ಒಂದು ಪಶುವಿಗೆ
ಆಸೆ ಭಯ ಯಾವುದೂ ಇಲ್ಲ;
ಕೊನೆಯ ಕಾಯುತ್ತಿರುವ ಮಾನವನಿಗೇ
ಆಸೆ ಭಯಗಳ ಕಾಟವೆಲ್ಲ;
ಸಾಯುವನು ಎಷ್ಟೋಸಲ – ಸತ್ತು,
ಹುಟ್ಟಿಬರುವನು ಮತ್ತು ಮತ್ತೂ
ದೊಡ್ಡ ಜೀವದ ಥರವೆ ಬೇರೆ
ಕೊಲೆಪಾತಕರ ಎದುರಿಸುತ್ತ
ಎಗ್ಗಿಲ್ಲದೇ ನಗುವನವನು
ಹಾರಿಹೋಗುವ ಜೀವದತ್ತ;
ಬಲ್ಲ ಸಾವಿನ ಮರ್‍ಮವನ್ನು – ಅಂಥವನು
ಸೃಷ್ಟಿಸಿದ ತಾನೆ ಸಾವನ್ನು.
*****