ವರುಷ ವರುಷಕ್ಕೊಮ್ಮೆ
ಹುಟ್ಟು ಹಾಕುವರು ನಿನ್ನ
ಮೆಟ್ಟಿ ನಿಲ್ಲುವರು ಕನ್ನಡ
ಕನ್ನಡವೆಂದು ಎಲೈ ತಾಯೆ
ಇಂಥ ಜೀವಿಗಳಿಗೆ ನೀಡು ಚೈತನ್ಯ
ನಿನ್ನ ಗುಣಗಾನ ಮಾಡುವರು
ಇವರೇ ಊರ ಮನೆಯವರು
ಇವರ ಭಂಡತನದ ಬದುಕಿಗೆ ನೀಡು ಚೈತನ್ಯ
ಅಂದು ನಿನ್ನ ರಕ್ಷಣೆಗಾಗಿ ಪ್ರಾಣ ತೆತ್ತವರು
ಅದೆಷ್ಟೊ ಜನ ವೀರೋನ್ಮಣಿಗಳು
ನಿನ್ನ ತೂಗುಯ್ಯಾಲೆಯಲ್ಲಿ ತೂಗಿಸಿ
ನಿನ್ನಲ್ಲೆ ಲೀನವಾದರು
ಇಂದು ವ್ಯರ್‍ಥವಾಯಿತೇ ಆ ಇತಿಹಾಸ
ತುಂಬು ಬಸುರ ತೊತ್ತ ಬಂಜೆರೆದೆಯ
ಬಂಜೆತನ ನಿನ್ನದಾಯಿತೆ
ಹೆರರ ಸೊತ್ತಿಗೆ ಅಂಗಲಾಚುವ
ಬದುಕು ಇವರದಾಯಿತೇ
ನ್ಯಾಯ ದೇವತೆಯಾಗಿ ಕಣ್ಣಿಗೆ
ಬಟ್ಟೆ ಕಟ್ಟುವ ಮುನ್ನ
ಅವರಿವರ ಬರುವಿಕೆಗಾಗಿ ಕಾಯುವ ಮುನ್ನ
ಒತ್ತೆ ಇಟ್ಟ ಬುದ್ದಿ ತನುಮನಗಳನ್ನ
ಹಿಡಿತುತ್ತ ಹಿಡಿದು ನಿನ್ನ ನೆನೆಯುವ ಮುನ್ನ
ಕ್ಷಮಿಸು ತಾಯೆ ನಿನ್ನ ಔದಾರ್‍ಯತೆಯಲಿ
ಲೀನವಾಗಿಸು ಬಿಡದಲೆ
ನಿನ್ನ ಕರುಳ ಬಳ್ಳಿಗಳಿಗೆ
ನೀಡು ಚೈತನ್ಯ
*****