ಕಲ್ಲ ಕಡದೇನೋ ಬಾವಾ?
ಕಬ್ಬ ನೆಟ್ಟೇ ನಾ
ಬೆಳಗಲ ಕಡದೇನೋ ಬಾವಾ? || ೧ ||

ಬಾವೀ ತೋಡದ್ಯೇನೋ?
ಕಬ್ಬಾ ನೆಟ್ಟೇನೇ ನಾನಾ
ಕಬ್ಬಾ ನೆಟ್ಟೇ ನಾ || ೨ ||

ಕಬ್ಬಾ ಕಡಕೊಡೋ ಬಾವಾ
ಕಬ್ಬಾ ಕಡಕೋಡೋ
ಇವತ್ತಾ ಕಬ್ಬಾ ಕಡಕೊಟ್ಟ ಮ್ಯಾಲ || ೩ ||

ಯಾವಾಗ ತೀರಿಸುವೇ ಮೈದ್ನಿ?
ಯಾವಾಗ ತೀರಿಸೂವೆ?
ಮುಂದೇ ಮೊಲೆ ಬರುವಾಗೇ || ೪ ||

ಹಿಂದೇ ತುರಬಾ ಕಟ್ಟೂ ವಾಗೇ
ಆವಾಗೇ ತೀರ್‍ಸುನೋ ಬಾವಾ
ಅವಾಗೆ ತೀರ್‍ಸುನೋ || ೫ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.