
ಬೀಜ ಬಿತ್ತಿದ ಅಮ್ಮನ ಹಿತ್ತಲಲಿ ಹಕ್ಕಿ ಪಕ್ಷಿಗಳ ಇನಿದನಿ ಚಿಮ್ಮಿ ಅರಳಿ ಘಮ್ಮೆಂದು ಸೂಸಿ ನೆಲತುಂಬ ಹರಡಿ ಹಾಸಿದ ಪಾರಿಜಾತ ಹೂರಾಶಿ. ಅಲ್ಲೇ ಬಟ್ಟೆ ಒಗೆಯುವ ಕಲ್ಲಮೇಲೆ ಮೂಡಿವೆ ಅವಳ ಕೈ ಬೆರಳ ಬಳೆಗಳ ಚಿಕ್ಕೀ ನಾದ ರೇಖೆಗಳು ಚಿತ್ತ ಪಟ ಪಾತರಗಿತ್ತಿ...
ಪ್ರತಿ ಹಕ್ಕಿಯ ಕೊರಳ ತುಂಬಾ ಧ್ವನಿಸುವ ಹಾಡು ನನ್ನ ನಿನ್ನ ಪ್ರೇಮ ನಲಿಯುವ ಉಲಿಯುವ ಹಾಡಾಗಿ ಸೂರ್ಯ ಕಿರಣ ಚೆಲ್ಲಿದ್ದಾನೆ ಶುಭ ಮುಂಜಾವಿನಲಿ. ಅರಿಕೆಗೊಂಡ ಪ್ರೀತಿ ಪ್ರತಿ ಹನಿಹನಿ ಚಿಮ್ಮಿ ಲಹರಿಯ ತೇಲಿ ಸಾಗಿವೆ ಸಾಕ್ಷಿ ಬೀಜಗಳು ಚಿಗುರುವ ಮೊಳಕೆಯಾ...
ನಮ್ಮೆಲ್ಲರ ಪಯಣದ ದಾರಿ ತುಂಬ ಗಿಡಮರ ಹಕ್ಕಿ ಚಕ್ಕಿ ವಿಸ್ಮಯಗಳ ನೋಟ ಕೂಟದಲ್ಲಿ ನಾನೀನಾಗಿ ನೀನಾನಾಗಿ ಬಿಟ್ಟು ಬಂದ ನಡೆದ ದಾರಿ ಹಸಿಬಿಸಿ ಎಲ್ಲವೂ ಇದ್ದು ಒಮ್ಮೆ ತಿರುಗಿ ನೋಡಿ ನರಳೋಣ ಇದು ಇರಬಹುದು ಬದುಕು ಏನೇನೋ ಹುಡುಕಾಟ ತಲ್ಲಣ ಶೃತಿ ಅಪಶೃತಿಗಳ...














