
ಅತ್ತಾ ಇತ್ತಾ ಸುತ್ತಾ ಮುತ್ತಾ ವ್ಯರ್ಥ ತಿರುಗಿದೆ ಗಣಗಣಾ ನನ್ನ ಅರಮನೆ ಶಿವನ ಸಿರಿಮನೆ ಮರೆತು ಸುತ್ತಿದೆ ಬಣಬಣ ಗುಡ್ಡಾ ಹತ್ತಿದೆ ಬೆಟ್ಟಾ ದಾಟಿದೆ ಶಿವನ ಹುಡುಕುತಾ ತಿರುಗಿದೆ ಹೊಳೆಯು ಹಳ್ಳಕೆ ಕಡಲು ಕೊಳ್ಳಕೆ ಶಿವನ ಕೂಗುತಾ ಬಳಲಿದೆ ಅವರು ಇವರಿ...
ಹೊಗುವಾಸೆಯಿಲ್ಲ ಕಾಲ್ತೆಗೆವಾಸೆಯಿಲ್ಲ, ಸು- ಮ್ಮನೆ ಮೇಲನಿಟ್ಟಿಸಿ ನಿಲ್ಲುವಾಸೆಯೆನಗೆ ಬೊಂಬೆಗೂಡಿದ ತೆನೆಯ ಗೋಪುರದ ಬಾಗಿಲಿನ ಕತ್ತಲೆಯೊಳಿಣಿಕಿಣಿಕಿ ಏರಲೆನ್ನ ಬಗೆ ಆ ಕತ್ತಲೊಳಹೊಕ್ಕು ಮರಳಿ ಹೊರಹಾರುವೀ ಗಿಳಿಪಾರಿವಾಳಗಳ ಭ್ರಮಣೆಯನು ಕಂಡು ಅವ್ಯಕ್...
ಬಾಳೆಹೊನ್ನೂರಿನಲ್ಲಿ ಜೇನು ತುಪ್ಪದ ಹಾಡು ಶಿವಯೋಗದಾನಂದ ಗಾನ ಕೇಳು ಗುರುಲಿಂಗ ಜಂಗಮದ ಶಿವತತ್ವ ಸಂಗೀತ ವೀರಭದ್ರನ ಬಳಿಗೆ ಬಂದು ಕೇಳು ಗಗನವೆ ಗುರುಲಿಂಗ ಭೂಮಿಯೆ ಶಿವಲಿಂಗ ವೀರಸೋಮೇಶ್ವರನ ಪೂಜೆ ನೋಡು ಶ್ರೀವೇದ ವೇದಾಂತ ಸಿದ್ದಾಂತ ಭಾಷ್ಯಗಳ ಪರಮ ಜ...
ಕರಣವಲಯದಿ ನಿಂತು ವಿಷಯವೈವಾಹಿಕದಿ ಪಡೆವ ಸೊಗಗಳನೊಲ್ಲದೆಯೆ ಮುಂದೆ ಸರಿದು ಮೈಜರೆದು ಮನಜರೆದು ಬುದ್ದಿ ತರ್ಕವ ಜರೆದು ಅದನೊಲ್ಲದಿದನೊಲ್ಲದಾವುದನೊ ತಿರಿದು ಊರಿಗೊಂದಿರುಳಂತೆ ನೆಲದಿ ನೆಲೆಯಿಲ್ಲದೆಯೆ ತಿರಿವ ತಿರುಕರ ಕಣಸೆ, ನಿನಗೆ ನೆಲೆ ಇಲ್ಲೆ? ಜಡ...
ಪಕ್ಷಿ ಇಂಚರ ಚಂದ ಪಂಚ ಪೀಠವೆ ಅಂದ ಬಾಳೆಹೊನ್ನೂರಿನಲಿ ಮನಕೆ ಆನಂದ ರಂಭಾಪುರಿ ಪೀಠ ನೋಡು ತಂಗಿ ||ಪಲ್ಲವಿ|| ತಾಯಿಯೆಂದರು ಗುರುವು ತಂದೆಯೆಂದರು ಗುರುವು ಅರುಹು ಮರೆತರೆ ಹೆಂಗ ಹೇಳೆ ತಂಗಿ ಕುಣಿಯೋಣ ಕೂಗೋಣ ಮಾಡೋಣ ಗುರುಗಾನ ಸತ್ಯ ಈಶ್ವರ ಜ್ಞಾನ ತಿ...
ಮನೆಯಲ್ಲ ಮಠವಲ್ಲ ರಾಜನರಮನೆಯಲ್ಲ ಇದು ನಾಟ್ಯ ಮಂದಿರ ಛಾತ್ರ ಸತ್ರವಲ್ಲ ಜೀವ ಬಯಸುವ ಭೋಗದುಪಕರಣವಲ್ಲವಿದು ಆವರ್ಥ ಘಟಿಸಿತೀ ತೆರ ಮಲೆಯ ಕಲ್ಲ? ಗೋಪುರದ ತುದಿಯಲ್ಲಿ ಬಾನನೆತ್ತುತ ನಿಂತು ಇರುಳಿನೊಳು ಮಿರುತಾರಗೆಯ ಮಾಲೆಗೊಳುತ ಮೋಡ ಮುತ್ತುವ ಜಡೆಗೆ ಜ...
ಓ ಯೋಗಿ ಶಿವಯೋಗಿ ಶಿವಶಿವಾ ಗುರುಯೋಗಿ ಶ್ರೀ ಜಗದ್ಗುರು ಯೋಗಿ ರೇಣುಕಾಚಾರ್ಯಾ ಮಲಯ ಪರ್ವತ ಶಿಖರ ಜ್ಞಾನಯೋಗದ ಮುಕುರ ಭಕ್ತ ಬಾಂದಳ ಸೂರ್ಯ ರೇಣುಕಾಚಾರ್ಯಾ ಯುಗದ ಸತ್ಯವು ಒಂದೆ ಜಗದ ಸತ್ಯವು ಒಂದೆ ಶಿವಾದ್ವೈತ ಸಿದ್ಧಾಂತ ನಿನ್ನಮಾರ್ಗಾ ನೂರು ದ...
ಅರಸಿ ತೀರದೊಲಾಸೆ ಕೆರಳೆ ನಾ ನಿಂತಿರುವೆ ಮಲೆದೇಗುಲದ ಹೊರಗೆ ತುಂಬನೇ ಬಯಸಿ ಅರಿವರಿತು ತೀರದಿಹ ಸೊಗಪಟ್ಟು, ತೀರದಿಹ ಅಳಲ ತಾಳುತ ತೀರದರಕೆಯನೆ ಮೆರಸಿ “ಅಣು ಬೃಹತ್ತುಗಳಲ್ಲಿ ಕುಗ್ಗಿ ಹಿಗ್ಗದ ತುಂಬೆ ಸೃಷ್ಟಿಯೆಷ್ಟುಂಡರೂ ತೀರದಿಹ ಸೊದೆಯೇ” ಎ...
ಮುಗಿಲ ಗಂಟೆಯು ನಿನಗೆ ಸೂರ್ಯ ದೀಪವು ನಿನಗೆ ವಿಶ್ವ ಪತ್ರಿಯು ನಿನಗೆ ರೇಣುಕಾರ್ಯಾ ಓ ಯೋಗಿ ವರಯೋಗಿ ಶಿವಯೋಗಿ ಸಿದ್ದೇಂದ್ರ ಕಡಲು ನಿನ್ನಯ ತೀರ್ಥ ರೇಣುಕಾರ್ಯಾ ತಂಪು ನಿನ್ನಯ ಶಕ್ತಿ ಸೊಂಪು ನಿನ್ನಯ ಯುಕ್ತಿ ವಿಶ್ವಲಿಂಗನೆ ನೀನು ರೇಣುಕಾರ್ಯಾ...
ಅಲ್ಲಿರಲಿ ಇಲ್ಲಿರಲಿ ಎಲ್ಲಿರಲಿ ತಲೆಬಾಗಿ ನಾ ತೆರೆದ ಮಲೆದೇಗುಲದ ಬಾಗಿಲಿದಿರು ನಿಂತ ತೆರವಾಗುತಿದೆ ನನ್ನ ಕಂಗಳಿಗಾಗೆ ಅರೆ ಬಾನು ಮರ ಹಕ್ಕಿ ಹೊಳ್ಳ ಹೂ ಹೊದರು ಅಂತರಂಗದ ದೈವ ಮೂಲೆತಿರುಗಿನೊಳವಿತು ಸನ್ನೆಗೈದಂತೆಯೇ ಮೈಗರೆವ ಪರಿಗೆ ಒಂದು ನಗೆ ಒಂದು...













