ಇರವಿನತ್ಯುಚ್ಚದೊಳು ಸೆಲೆವೊಡೆವುದಾನಂದ
ಶಿಶುಸಾಧುಸಂತಕವಿಯೋಗಿಮುನಿಗೆಟುಕಿ
ದುಃಖತೈಷ್ಣೋಪಶಮಜನ್ಯ ಸುಖವಲ್ಲವದು
ಭೋಗಕ್ಕೆ ಬಾರದದು ಶಿವಜಟೆಯ ತುಳುಕಿ
ತುಡಿವ ತಾರೆಯ ಬೆಳಕಿಗೀಬೆಳಕೆ ಚರಿತಾರ್ಥ-
ವೆನೆ ಜೀವಚೈತನ್ಯ ದಸಮತೇಜವದು
ವಿಷಯವಿಂದ್ರಿಯದೊಡನೆ ತಾಗೆ ಚೆಂಗೆಂಡವನು
ಕೆದರಿ ಚೇತನ ಸುಡುತ ಇರವನರುಹುವುದು-
ಆ ಕ್ವಚಿದ್ದರ್ಶನದೊಳಹುದೆಲ್ಲ ಚೇತನಕು ರಸದ ನೀರಡಿಕೆ
ಅದರಿನೀ ದುಃಖಶಮದೈವನಮನಂ, ಅದರಿನೀ ತಿಳಿಮೆಯಡಿಕೆ.
*****