ಕುತುಕಿಗೆತ್ತಣ ಬಿಡುವು, ರಸಪದದ ಕನಸಿಗಗೆ
ಬಲುಕವಲೊಡೆದ ಬಾಳ್‌ಬಳಿಯ ದಾರಿಗನಿಗೆ
ಪಯಣದಾಯಾಸವನು ಮಣಿಗೆಯೊಳು ತೀರಿಸುತ
ಮರಳಿ ಕಂತೆಯ ಹೆಗಲಿಗೇರಿಸಿ ನಿಲುವಗೆ?
ಗುರಿಗೊಯ್ವ ನಿಟ್ಟಾವುದೆಲ್ಲಿ ಚಿಂತೆಗೆ ನಿಲುವೆ
ತನುಜೀವಮನದೊಡ್ಡಿಗಿದಕಾವ ಸಲ್ಮೆ
ಬಂಧನವಿದೇತರಿಂ ಏತರಿಂ ನಿರ್ಮುಕ್ತಿ
ಬಂದಿಯಾವಂ ಬಂದಿಗನಿನಾವ ನಲ್ಮೆ?
ಭೂತಾತ್ಮಸಾಂಗತ್ಯ ನಿರ್ವಾಹಕುಶಲವೀ ಜೀವಫಲಕ
ಭೂತಾತ್ಮರತಿಗೇಕೊದಗದೀ ಉಸಿರಿರುವ ತನಕ?
*****


















