ತುಂಬು ಕಂಕಣ ಚಲುವಿ ತುಂಬ ಬಾರೆ ಇಲ್ಲಿ
ಬಾಳೆಹೊನ್ನೂರಿನಲಿ ಬೆಳಕು ಕಂಡೆ
ಏನು ಕೋಗಿಲೆ ಗಾನ ಎಂಥ ಪ್ರೀತಿಯ ಪಾನ
ಗುಡ್ಡ ಬೆಟ್ಟದ ಮೌನ ಗುರುವ ಕಂಡೆ
ಜಾತಿ ಜಂಜಡ ಇಲ್ಲ ಕೋತಿ ಕಿಚಪಿಚ ಇಲ್ಲ
ಓ ನೋಡು ನಿ೦ತಾನು ವೀರಭದ್ರ
ಪ್ರೀತಿಯೊಂದೆ ಗೊತ್ತು ಪ್ರಾಣಲಿಂಗದ ಚಿತ್ತು
ಶಿವಶಿವಾ ಗುರುಬ೦ದ ಪೂರ್ಣಚಂದ್ರ
ಆದಿ ಲಿಂಗೋದ್ಭವನ ಅಮರ ಲೋಕವ ಕಂಡೆ
ಕಮಲ ಮಲ್ಲಿಗೆ ಜಾಜಿ ಕುಸುಮ ಕಂಡೆ
ತಾಯಿಯೆಂದರು ಇವನೆ ತಂದೆಯೆಂದರು ಇವನೆ
ಅರುಹು ನೀಡಿದ ಮೇರು ಗುರುವ ಕಂಡೆ
ಬೆಲ್ಲ ಕೊಬ್ಬರಿಯಲ್ಲಿ ನೆಲ್ಲಿ ನೀರಲ ಕೊಟ್ಟ
ಜಗದ ಜಂಗಮ ರಾಯ ಬಂದ ಬಂದ
ಜನನ ಮರಣವ ದಾಟಿ ಶಾಂತಿ ಪ್ರೀತಿಯ ಕೊಟ್ಟ
ಭುವನಕ್ಕೆ ಶಿವಧರ್ಮ ತೇರು ತಂದ
*****



















