ಗುರುವೆ ನಿನ್ನ ನೆನಪು ತಂಪು
ಲಿಂಗ ಬೆಳಕು ಬೆಳಗಿದೆ
ಒಳಗು ತಂಪು ಹೊರಗು ಸಂಪು
ಜ್ಯೋತಿ ಲಿಂಗವು ಅರಳಿದೆ
ಮೌನ ಕಡಲಿನ ಶಾಂತ ಅಲೆಯಲಿ
ಮನವು ಮಲ್ಲಿಗೆಯಾಗಿದೆ
ಆಳ ಸಾಗರ ಶಾಂತ ತಳದಲಿ
ಲಿಂಗ ಬಾಗಿಲು ತೆರೆದಿದೆ
ನಿನ್ನ ಸ್ಪರ್ಶಾ ಹರ್ಷ ಹರ್ಷಾ
ನವಿಲು ನಾಟ್ಯವ ಗೈದಿದೆ
ಎಲ್ಲಿ ಗುರುಮನೆ ಲಿಂಗ ಸಿರಿಮನೆ
ಅಲ್ಲಿ ಕೋಗಿಲೆ ಕೂಗಿದೆ
ನಾನೆ ಅಂಗನು ಗುರುವೆ ಲಿಂಗನು
ಜಗವೆ ಕೂಡಲ ಸಂಗಮಾ
ಗುರುವು ನೀನೆ ಅರುಹು ನೀನೆ
ವಿಶ್ವ ಅನುಪಮ ಜಂಗಮಾ
*****