
ರೂಪಾತೀತ ಹಸಿವಿಗೆ ನಾನಾರೂಪ ಬಹುರೂಪ ಸಾಧ್ಯತೆಯ ರೊಟ್ಟಿಗೆ ಏಕರೂಪ...
ಹಸಿವೆಗೆ ಬಲಕ್ಕೆ ಬಲವಿಲ್ಲ ಎಡಕ್ಕೆ ಎಡವಿಲ್ಲ ಮೊದಲಿಲ್ಲ ಕೊನೆಯೆಂಬುದಿಲ್ಲ. ಆದರೂ ಊರು ಉಸಾಬರಿಯ ಕೆಲಸ. ಯಜಮಾನಿಕೆಯ ಗತ್ತು. ರೊಟ್ಟಿಗೆ ತಿಳಿದಿಲ್ಲ ತನ್ನ ತಾಕತ್ತು....
ಬೇಸಿಗೆ ಬಿಸಿಲು, ನೆರಳಿನ ಆಸೆ ಉಸ್ಸೆಂದು ಕುಳಿತರೆ ದುತ್ತೆಂದು ಬರುತ್ತಾರೆ ಭಿಕ್ಷುಕರು ಕೊರಕಲು ಧ್ವನಿ ಕೂಗಿಗೆ ಎಂಟಾಣೆ ಕೊಟ್ಟರೆ – ರೂಪಾಯಿ ಕೊಡುವ ತಾಕತ್ತಿಲ್ಲದವರು ಕಬ್ಬನ್ ಪಾಕಿðಗೇಕೆ ಬರುವಿರಿ? ಎಂದಾಗ ೩೭ ಡಿಗ್ರಿ ಬಿಸಿಲೇ ಹಿತವಾಗಿ...













