
ಬರುವುದಿಲ್ಲವಿನ್ನೆಂದರೆ ಬರುತಿದ್ದರು ದೂರ ದೇಶದ ವ್ಯಾಪಾರಿಗಳು ವಿಧ ವಿಧ ಸರಕನು ತುಂಬಿದ ಹೇರು ಎಳೆಯಲು ಅರಬೀ ಕುದುರೆಗಳು ಊರಿನ ಮುಂದೆಯೆ ಡೇರೆಯ ಹಾಕಿ ಹೂಡುವರಿವರು ಬಿಡಾರ ಗಲ್ಲಿ ಗಲ್ಲಿಗೂ ಬರುವರು ಹುಡುಕಿ ಮಾತೇ ಮಾಯಾ ಬಜಾರ ಉಂಗುರ ಮಣಿಸರ ಕಾಡ...
ಹೊತ್ತು ಮೀರಿತ್ತು ಮನಸ್ಸು ದಣಿದಿತ್ತು ತನಗೆ ತಾನೇ ವಿರೋಧಿಸುತಿತ್ತು ಆಗ ಟಣ್ಣನೆ ಸಿಡಿದೆ ನೀನು ನಕ್ಷತ್ರಪಥದಿಂದ ಬಿದ್ದ ಶಾಖೆ ರೂಪಿಸುವಂತೆ ತನ್ನ ದಾರಿಯ ರೇಖೆ ತಡೆಯಲೆಳಸಿದ್ದೆ ಕೈಚಾಚಬಯಸಿದ್ದೆ ಕಾದು ಕೆಂಪಾದ ಕಬ್ಬಿಣದ ತುಂಡು ಬಡಿವ ಕಮ್ಮಾರನದರ...
ಯಾಕೆ ಸೃಷ್ಟಿಸಿದೆ ನನ್ನನೀ ರೀತಿ ಅಲ್ಲಿಗೂ ಸಲ್ಲದೆ ಇಲ್ಲಿಯೂ ನಿಲ್ಲದೆ ಇರುಳಿನೇಕಾಂತದ ನೀರವತೆಯಲ್ಲಿ ನನಗೆ ನಾನೇ ಆಗುವಂತೆ ಭೀತಿ ಬೀಸಿತೆ ಗಾಳಿ? ಆ! ಏನದು ಎದ್ದು ಮರಮರದ ಮೇಲು ಮರಮರವೆಂದು ಹಾರುವುದೆ ಕುಣಿಯುವುದೆ ಕುಪ್ಪಳಿಸುವುದೆ ನೋಡುವೆನು ನಾ...
ಮಂಡೂಕಗಳಿಗವಸ್ಥೆ ಮೂರು: ನಿದ್ದೆ, ಎಚ್ಚರ, ಮಧ್ಯಂತರ. ಮನುಷ್ಯರಿಗೆ ಕೂಡ ಅಷ್ಟೆ. ನಿದ್ದೆಯಲಿ ಕನಸು ಕೀಟಗಳದ್ದೆ ಎಚ್ಚರದಲವುಗಳ ಹಿಡಿಯಲು ಹುಡುಕಾಟ ಸಿಕ್ಕಿದರೆ ಊಟ, ಇಲ್ಲದಿದ್ದರೆ ಉಪವಾಸ ಮಧ್ಯಂತರಾವಸ್ಥೆಯಲಿ ಹೀಗೆಯೇ ಬೇಟ ಹೊಸತೇನಲ್ಲ; ತಲಾಂತರದಿಂ...
ಅಡಿಗರಿಂದಲು ಕಲಿತೆ ನಾಡಿಗರಿಂದಲು ಕಲಿತೆ ಅಡಿಗಡಿಗೆ ಕಲಿತುದನು ನುಡಿಯಲ್ಲಿ ಮರೆತೆ ರತಿಯ ಬಗ್ಗೆಯು ಬರೆದೆ ಆರತಿಯ ಬಗ್ಗೆಯು ಬರೆದೆ ಮತಿಯ ಪರಿಧಿಗೆ ತೋರಿದಂತೆ ಒರೆದೆ ಹರಿದ ಕಾಗದದ ಚೂರು ಮಹಾಯುದ್ಧಗಳ ಜೋರು ಧರೆಯೊಳಗೆ ಸಕಲವನು ತಿಳಿದವರು ಯಾರು? ಎ...
ಕೆಟ್ಟ ಹುಡುಗ ಜಾನ್ ಮೆಕೆನ್ರೊ ಬಯ್ದುಗಿಯ್ದು ಮಾಡಿದರೆ ಎಲ್ಲಾ ಮಂದಿ ರೇಗುವವರೆ- ವದಿಯೋಣವನ್ನ ಬನ್ರೊ! ಅದೇ ಹುಡುಗ ಜಾನ್ ಮೆಕೆನ್ರೊ ಆಡಲು ಮಜಬೂತು ನೋಡುತ್ತಾರೆ ಸುಮ್ಮನೇಕೇ ಕೂತು ಏನದ್ಭುತ ಕಣ್ರೊ! ಕಣ್ಣ ಮುಂದೆ ಮೋಡವೊಂದು ಎದ್ದ ಹಾಗೇನೆ ಥೇಟು ಎ...













