(ಸಿ. ಅಶ್ವತ್ಥ್ ಗೋಸ್ಕರ) ತಿಂಗಳ ಬೆಳಕಿಗೆ ಭಾವದ ಸೆಳಕಿಗೆ ಏತಕೊ ತುಂಬಿದೆ ನೋವಿನ ಅನಿಸಿಕೆ ಯಾರು ಬಂದರು ನನ್ನ ಬಳಿಗೆ ಯಾರೂ ಇಲ್ಲದ ವೇಳೆಗೆ ಅಂಥ ನೆನಪು ಇಂದು ಹೀಗೆ ಸುಳಿವುದೇ ಈ ತೆರದಲಿ...
(ಶಿಶುನಾಳ ಷರೀಫ್ ಸಾಹೇಬರನ್ನು ನೆನೆದು) ಕುಣಿಕುಣಿವಳು ನಮ್ಮ ಕುಂಬಾರಗಿತ್ತಿ ಕೈಕಾಲಿಗೆ ಕೆಂಪು ರಂಗು ಹತ್ತಿ ನೋವು ನಲಿವುಗಳೆಂಬ ಭೇದ ಮರೆತು ಮಣ್ಣಿಗೆ ಮಣ್ಣು ಹದನಾಗಿ ಬೆರೆತು ತಿರುಗಿಸಿ ಭೂಲೋಕದ ತಿಗರಿ ಅದರೊಳಗೆ ಸಂಸಾರವೆಂಬ ಬುಗರಿ...
ಕರುಣೆಯೆ ಬೆಳಕು ಎಂದನು ಬುದ್ಧ ಕರುಣೆಯಿಲ್ಲದ ಜಗದಂತ್ಯವು ಸಿದ್ಧ ಎಷ್ಟೋ ನಾಗರಿಕತೆಗಳ ಕತೆಗಳ ಎಷ್ಟೋ ರಾಜ್ಯದ ರಾಜರ ಚಿತೆಗಳ ಕಂಡಿತು ಇತಿಹಾಸದ ಕಣ್ಣು ಕೊಂಡಿತು ನಾವೀ ನಡೆಯುವ ಮಣ್ಣು ಮನುಷ್ಯ ಮನುಷ್ಯರ ನಡುವಿನ ಯುದ್ದ...
ಅದೇ ಮುಗಿಲಿದೆ ಅದೇ ದಿಗಿಲಿದೆ ಅಂದಿಗು ಇಂದಿಗು ಇದೇ ಇಂದಿಗು ಎಂದಿಗು ಅದೇ ಬೆಳಕು ಮೂಡುತಿದೆ ಬೆಳಕು ಮಾಯುತಿದೆ ಹಗಲು ರಾತ್ರಿಗಳ ಹೊಸೆಯುತಿದೆ ಹೂವು ಬಿರಿಯುತಿದೆ ಹೂವು ಬೀಳುತಿದೆ ಬೀಜ ಬೇರುಗಳ ಹೊಸೆಯುತಿದೆ ಕಡಲು...
ಕುದುರೆಮುಖ ಕುದುರೆಮುಖ ಆ ಹೆಸರಿನಲ್ಲೆ ಎಂಥ ಸುಖ ಗುಡ್ಡವಿಲ್ಲ ಬೆಟ್ಟವಿಲ್ಲ ಶಬ್ದ ಕೊರೆದ ನಿರ್ಮಿತಿ ಗಾಳಿಗಿಂತ ವೇಗವಾಗಿ ಎಲ್ಲಿ ನನ್ನನೊಯ್ಯುತಿ ದಾಟಿ ಕಡಲ ಮೀಟಿ ಮುಗಿಲ ಬಂದ ದೇಶ ಯಾವುದು ತೆರೆದು ಕಿಟಿಕಿ ಕಣ್ಣ...
ಎಲ್ಲ ಕಪ್ಪೆಗಳಂತಲ್ಲ ನಮ್ಮ ಗೂಂಕುರು ಕಪ್ಪೆ ಇನ್ನುಳಿದ ಕಪ್ಪೆಗಳೆಲ್ಲ ಇದುರೆದುರು ಬರಿಯ ಸಪ್ಪೆ ಹೆಬ್ಬಂಡೆಯಂತೆ ಹೇಗೆ ಕುಳಿತು ಬಿಟ್ಟಿದೆ ನೋಡಿ ಹೀಗೆ ನಾವು ನಡೆವ ದಾರಿಗಡ್ಡ ಎಲ್ಲಿಂದ ಬಂತೊ ಈ ಗುಡ್ಡ! ಮೇಲೆಲ್ಲ ಕಣಿವೆ...
ಕೇಳಿ ಭಟ್ಟರೆ ಏಳಿ ಶೆಟ್ಟರೆ ಎರಡು ಸಾವಿರ ಖಂಡಿಗೆ ಇಂದೆ ಸಾಗಿಸಿ ಈಗ ಸಾಗಿಸಿ ಎಲ್ಲ ಸರಕನು ಮಂಡಿಗೆ ಗೂಗೆ ಹೇಳಿತು ಕಾಗೆ ಕೇಳಿತು ಸೋಗೆ ನಕ್ಕಿತು ಮೆಲ್ಲಗೆ ಮಾವು ಚಿಗುರಿತು ಬೇವು ಕೊನರಿತು...