(ಶಿಶುನಾಳ ಷರೀಫ್ ಸಾಹೇಬರ ಸ್ಫೂರ್ತಿಯಿಂದ)

ಯಾಕ ಫಿಕೃ ಮಾಡತಿ ಫಕೀರ
ನೀ ನೋಡಿದವ ಬಹಳ ಊರ

ಹಿಮಾಲಯಕ್ಕೆಂದು ಹೋದಿ
ಅಲ್ಲಿ ಚಳಿಗೆ ಕೌದಿ ಹೊದ್ದಿ
ಬಂತೇನು ನಿನಗ ನಿದ್ದಿ

ಮೆಕ್ಕ ಮದೀನ ಸುತ್ತಿಬಂದಿ
ರಾಮ ರಹೀಮ ಒಬ್ಬ ಅಂದಿ
ತಿನಬಾರದ್ದೆಲ್ಲ ತಿಂದಿ

ಹೆಂಡಿರು ಮಕ್ಕಳನೆಲ್ಲ ಬಿಟ್ಟಿ
ಕಾವಿ ಬಟ್ಟೆಗಳನ್ನೆ ತೊಟ್ಟಿ
ಎಲ್ಲಿ ಸಿಕ್ಕಿತು ನಿನಗ ರೊಟ್ಟಿ

ಯಾರೂ ಕಾಣದುದೇನ ಕಂಡಿ
ತೆರೆಯಿತೆ ಕನಕನ ಕಿಂಡಿ
ತರಚಿಕೊಂಡಿಯ ಮಂಡಿ
*****