ಎಲ್ಲಿಗೆ ಹೋಗೋಣ

ಎಲ್ಲಿಗೆ ಹೋಗೋಣ ಏನ ಮಾಡೋಣ
ಗೆಳತಿ ನನ ಗೆಳತಿ
ಎಲ್ಲಾರು ಹೋಗೋಣ ಏನಾರ ಮಾಡೋಣ
ಗೆಳೆಯ ನನ ಗೆಳೆಯ

ಎಡನಾಡಿನಲೊಂದು ಮನೆಯನು ಮಾಡಿ
ಎಣಿಸೋಣ ಮೋಡಗಳ
ಎಡಕುಮೇರಿಯಲೊಂದು ಗುಡಿಸಲು ಹಾಕಿ
ಏರೋಣ ಬೆಟ್ಟಗಳ

ಮೈಸೂರಿನಲೊಂದು ಮನೆಯನು ಮಾಡಿ
ಮೆರೆಯೋಣ ದಸರೆಗಳ
ಮಡಕೇರಿಯಲೊಂದು ಗುಡಿಸಲು ಹಾಕಿ
ಮಾಡೋಣ ಮಡಕೆಗಳ

ಕಾರವಾರದಲೊಂದು ಮನೆಯನು ಮಾಡಿ
ಕರೆಯೋಣ ಕಡಲುಗಳ
ಕಾರ್ಕಳದಲೊಂದು ಗುಡಿಸಲು ಹಾಕಿ
ಕಡೆಯೋಣ ಕಲ್ಲುಗಳ

ತಲಕಾವೇರಿಯಲೊಂದು ಮನೆಯನು ಮಾಡಿ
ತೇಲಿಸೋಣ ದೀಪಗಳ
ತಿರುವನಂತಪುರದಲೊಂದು ಗುಡಿಸಲು ಹಾಕಿ
ತಿರುಗೋಣ ಬೀದಿಗಳ

ಎಲ್ಲಿಗೆ ಹೋಗೋಣ ಏನ ಮಾಡೋಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ೨.೨ ಸುವರ್ಣ ಪ್ರಮಿತಿ
Next post ಕೊಳಲಿನಾ ಕರೆ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…