
ಹೊಟ್ಟೆಗಂತೂ ಕೂಳು ಇಲ್ಲ ಬಟ್ಟೆಯಂತೂ ಸಿಕ್ಕಲಿಲ್ಲ ಬಾಳಿಗಂತೂ ಬಾಯಿಯಿಲ್ಲ ನಮ್ಮ ನೋವು ಮೀಟಲಿಲ್ಲ. ನಮ್ಮ ಜೀವ ನಮಗೆ ಬಿಡಿ ಬದುಕಲಿಷ್ಟು ಕಾಲ ಕೊಡಿ. ಮುಖದ ತುಂಬ ಜೇಡ ಬಲೆ ನಡೆವ ಬೀದಿ ನಮ್ಮ ನೆಲೆ ಬಯಲ ಜೈಲಿನಲ್ಲಿ ಬಾಳು ಗೋಳೆ ನಮ್ಮ ದಿನದ ಕೂಳು. ನ...
ಹೂತು ಹೋಗಿದೆ ಒಲವಿನ ಮಾತು ಉಸಿರು ನರಳಿದೆ ಸೆಣಸುತ ಸೋತು ಸಾಯುವ ಮುಂಚೆ ನೀರು ಕೊಡಿ ಬಾಯಾರಿದೆ ಹೃದಯ. ಹೊಟ್ಟೆಯ ಒಳಗಿನ ಸುಟ್ಟ ವಾಸನೆ ಬೀದಿಗೆ ಹರಿದು ಬಡತನ ಬಯಲು ಮೂಗು ಮುಚ್ಚಿದೆ ಮನೆ ಮನೆ ಸಾಲು ಬೀದಿ ಬೀದಿಯಲಿ ಹುಡುಕಿ ನೋಡಿದರು ಹೃದಯದ ವಿಳಾಸ...
ನಕ್ಕವರೆಲ್ಲ ನನ್ನವರೆಂದು ಮಳೆಗರೆಯಿತು ಮನಸು ಸುತ್ತ ಮುತ್ತಿದ ಕಂಡ ಕಂಡವರಿಗೆ ಹದವಾಯಿತು ಕನಸು ಕಳಕಳ ಎನ್ನುವ ಕನಸಿಗೆ ಅವರು ಅಮಲಿನ ಹಾಸಿಗೆ ಹಾಸಿದರು ನರಳಿತು ಕನಸು ಸುಖ ಸಂತಸದಲಿ ಮರೆತು ಹೋಯಿತು ಮಳೆ ಮನಸು ಬಸಿರಿನ ಕನಸಿಗೆ ಹುಟ್ಟಿದ ಮಕ್ಕಳು ನ...
ನಾವು ಮುಟ್ಟಿ ನಿಂತ ಮರದ ಹೂವು ಉದುರಿತು ನಾವು ನಡೆದ ಹಾದಿ ಹಸಿರು ಉರಿದು ಹೋಯಿತು ನಾವು ಕರೆದ ಕೆಚ್ಚಲಲ್ಲಿ ಹಾಲು ಬತ್ತಿತು ನಾವು ಹುಡುಕಿ ಕಂಡ ಹೃದಯ ರಾಗ ಸತ್ತಿತು ಸೋತ ಮುಖದ ಮನೆಗೆ ಬಳಿಯೆ ಸುಣ್ಣ ಸಿಡಿಯಿತು ಬಡವರೆಂದು, ಕಡೆದ ಕಲ್ಲು ಕಣ್ಣ ಕಳೆ...
ಬಡವನ ಹೆಂಡತಿ ಒಡೆದ ಮಡಕೆಯ ಬಾಳು ಸೋರಿ ಹೋಗುವ ಸುಖ ಹೆಂಗೆ ತೆಡೆದಾಳೊ ತಾಯಿ ಹೆಂಗೆ ಪಡೆದಾಳೊ? ಒಡೆಯನ ಒಡಲಿಗೆ ಜೀತಗಾರನು ಗಂಡ ಸಂಜೀಕೆ ಬಂದಾನು ಹೊತ್ತು ತಂದಾನು ಗೊಟಕೆನ್ನುವ ಮಕ್ಕಳಿಗೆ ಗುಟುಕು ಕೊಟ್ಟಾನು. ಬಯಕೆ ಬಾಗಿಲ ಬಳಿ ತವಕದ ತವರು ಸೀರೆ ತ...














